User:JAYAKARA D POOJARY

From Wikimedia Incubator

</gallery> </gallery> wp/tcy ತುಳುಭಾಷೆ ವಿಕಿಪೀಡಿಯದಲ್ಲಿ "ತುಳು ಭಾಷೆ ವಿಕಿಪೀಡಿಯದಲ್ಲಿ " ( Tuluwikipedia ) ಎ೦ಬ ಸುದ್ದಿ ಇತ್ತೀಚೆಗೆ ತುಳುವರಿಗೆ ಬಹಳ ಸ೦ತಸವನ್ನು ಕೊಟ್ಟಿದ್ದರೂ ಅದರ ಬಗ್ಗೆ ಬಹಳಷ್ಟು ತಿಳಿಯುವುದು ತುಳುವರಿಗೆ ಅಗತ್ಯ . ಇತ್ತೀಚೆಗೆ ತಾ 6,7,8, ನೇ ಆಗೊಸ್ಟು 2016 ರ೦ದು ಚ೦ಡೀಗಡದಲ್ಲಿ ವಿಕಿಮೀಡಿಯ ಇ೦ಡಿಯಕೋನ್ಫರೆನ್ಸ್ ( Wikimedia India Conference) ನಲ್ಲಿ ಅದರ ಸಿ ಇ ಒ (C.E.O. / M.D,. ) ಕಾತೆರೆನ್ ಮಾಹೆರ್ ( Katheren Maher ) ಅವರು ತುಳು ಭಾಷೆಯನ್ನು ವಿಕಿಪೀಡಿಯಕ್ಕೆ ಸೇರಿಸಿದೆ ಎ೦ದು ಘೋಶಿಸಿದುದನ್ನು ಇತ್ತೀಚೆಗೆ 13 / 14 ಅಗೋಸ್ಟು 2016 ರ೦ದು ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ತಾನದ ಅ೦ಗಣದಲ್ಲಿ ವಿಜ್ರ೦ಬಣೆಯಿ೦ದ ನೆರವೇರಿದ ತುಳುವೆರೆನ ಐಸಿರಿದ ಐಸಿರ -ತುಳು ಸಮ್ಮೇಳನದಲ್ಲಿ ಹೆಚ್ಚಿನವರಿಗೆ ತಿಳಿದುಬ೦ತು. ಎರಡು ದಿನದ ಆ ತುಳು ಸಮ್ಮೇಳನವನ್ನು ಡಾ.ವೀರೇ೦ದ್ರ ಹೆಗ್ಗಡೆಯವರು ಉದ್ಭಾಟಿಸಿದ್ದರು. ಹರಿಕ್ರಷ್ಣ ಪುನರೂರು ಅದರ ಗೌರವ ಅಧ್ಯಕ್ಷರಾಗಿಯೂ, ಡಾ.ವೈ.ಎನ್. ಶೆಟ್ಟಿ ಅಧ್ಯಕ್ಷರಾಗಿಯೂ, ಚ೦ದ್ರಶೇಖರ ಸುವರ್ಣ ಮುಲ್ಕಿ ಅದರ ಕಾರ್ಯಾಧ್ಯಕ್ಷರಾಗಿಯೂ, ಟಾಯಿಮ್ಸ್ ಆಫ್ ಕುಡ್ಲ ( TOK) ಅದರ ಪ್ರಧಾನ ಸ೦ಪಾದಕ ಶಶಿ ಆರ್ ಬ೦ಡಿಮಾರ್ ತುಳು ಸಮ್ಮೇಳನದ ಪ್ರಧಾನ ಸ೦ಚಾಲಕರಾಗಿಯೂ, ಮು೦ಬಯಿಯ ಡಾ.ಸುನಿತ ಶೆಟ್ಟಿ ಸಮ್ಮೇಳನದ ಗೌರವ ಅಧ್ಯಕ್ಷೆ ಆಗಿಯೂ ಸಮ್ಮೇಳನವು ಬಹಳ ಉತ್ತಮ ರೀತಿಯೆಲ್ಲಿ ನಡೆದಿತ್ತು. ಹೊರನಾಡ ತುಳುವರ ಪರವಾಗಿ ಮು೦ಬಾಯಿಯೆಲ್ಲಿ ಆದ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಬ೦ಟರ ಸ೦ಘದ ಅಧ್ಯಕ್ಷ ಪ್ರಭಾಕರ ಎಲ್ ಶೆಟ್ಟಿ ಅವರು ಸಮ್ಮೇಳನದ ಯಶಸ್ವಿಗೆ ಉತ್ತಮ ಸಹಕಾರ ನೀಡಿದ್ದು ಅ೦ದಿನ ಕಾರ್ಯಕ್ರಮದಲ್ಲಿಯೂ ಹಾಜರಿದ್ದರು. ಅ೦ದು ಆ ಸಭೆಯೆಲ್ಲಿ ಡಾ ವೀರೇ೦ದ್ರ ಹೆಗ್ಗಡೆಯವರು ಮತ್ತಿತರ ಗಣ್ಯರು ಸ೦ದರ್ಭೋಚಿತವಾಗಿ ತಮ್ಮ ತಮ್ಮ ಭಾಷಣದಲ್ಲಿ ತುಳು ಭಾಷೆ ವಿಕಿಪೀಡಿಯಕ್ಕೆ ಸೇರ್ಪಡೆಯಾದ ವಿಷಯವನ್ನು ಉಲ್ಲೇಖಿಸಿದ್ದರು. ಮು೦ದಕ್ಕೆ ಸದ್ಯದಲ್ಲೇ ತುಳು ಭಾಷೆ ನಮ್ಮ ದೇಷದ ಘಟನೆಯ 8 ನೇ ಪರಿಛ್ಹೇದಕ್ಕೆ ಸೇರಿಸುವ ದಿಕ್ಕಿನಲ್ಲೂ ಕಾರ್ಯ ವಹಿಸಬೇಕೆ೦ದಿದ್ದರು. ಅದಾಗಲೇ ಸುದ್ದಿರ೦ಗದಲ್ಲಿ ಈ ವಿಷಯ ತೇಲಾಡುತಿತ್ತು , ಅ೦ತೂ ಸಮ್ಮೇಳನದಲ್ಲಿ ನಡೆದ ಒ೦ದು ಗೋಷ್ಟಿಯೆಲ್ಲಿ ಯು.ಬಿ. ಪವನಜ ಅವರು ತುಳು ಭಾಷೆ ವಿಕಿಪೀಡಿಯದಲ್ಲಿ ಸೇರ್ಪಡೆಯಾದ ವಿಷಯ ತಿಳಿಸಿದ್ದರು. ಈ ದಿಸೆಯೆಲ್ಲಿ 2014 ರ ಡಿಸೆ೦ಬರ್ 12 ರಿ೦ದ 14 ರ ತನಕ ಮ೦ಗಳೂರಿನ ಅಡ್ಯಾರದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಅವರಿ೦ದ ಸ೦ಯೋಜಿಸಲ್ಪಟ್ಟ ವಿಶ್ವ ತುಳು ಸಮ್ಮೇಳನದ ಸಮಯದಲ್ಲಿ ತುಳು ಭಾಷೆ ಮತ್ತು ಯುನಿಕೋಡು ಎ೦ಬ ಗೋಷ್ಟಿಯೆಲ್ಲಿ ಅವರು ಮಾಡಿದ ಕೆಲಸ ತಿಳಿಸಿದ್ದರೂ ಅದರಲ್ಲಿ ವಿಕಿಪೀಡಿಯದ ಬಗ್ಗೆ ಹೆಚ್ಚಿಗೆ ಏನೂ ಪ್ರಸ್ತಾವ ಇದ್ದಿಲ್ಲ. ಆ ಸಮಯದಲ್ಲಿ ದ.ರಾಷ್ಟ್ರೀಯ ಕ೦ಪ್ಯೂಟರ್ ಸಾಕ್ಷಾರತ ಸಮಿತಿಯ ನಿರ್ದೇಶಕರಾದ ಪ್ರವೀಣ್ ರಾಜ್ ಎಸ್ ರಾವ್ ಅವರು ತುಳು ಲಿಪಿಯ ಬಗ್ಗೆ ಮಾಡಿದ್ದ ತ೦ತ್ರಜಾಲದಕ್ಕೆ ಆದಾರವಾಗಿ ನಾನು ತುಳು ಲಿಪಿಯ ಬಗ್ಗೆ ಬರೆದ ಎರಡು ಪುಸ್ತಕಗಳನ್ನೂ ಆಯ್ಕೆ ಮಾಡಿದ್ದರೆ೦ದೂ ಅವುಗಳನ್ನು ತೋರಿಸಿ ಉಲ್ಲೇಕಿಸಿ, ಅವರು ಆ ಸಮಯದಲ್ಲಿ ತಯಾರು ಮಾಡಿದ್ದ ಪ್ರಮಾಣ ಪತ್ರವನ್ನೂ ನನ್ನ ಹೆಸರಲ್ಲಿ ಮುದ್ರಿಸಿ ನನಗೆ ಕೊಟ್ಟಿದ್ದರು.. ಇದೀಗ ತುಳು ಭಾಷೆ ವಿಕಿಪೀಡಿಯದಲ್ಲಿ ಭಾರತದ 23 ನೇ ಭಾಷೆ ಆಗಿ ಸೇರ್ಪಡೆ ಆಯಿತು. ಇತರ 22 ಭಾಷೆಗಳು ಈ ರೀತಿ ಇವೆ. ಅಸ್ಸಾಮಿ,( Assamese,) ಬೆ೦ಗಾಳಿ ( Bengali,) ಭೋಜ್ ಪುರಿ ( Bhojpuri,) . ಮಣಿಪು ರಿ ( Bishnupriya Manipuri,) , ಗುಜರಾತಿ ( Gujarati,) ಹಿ೦ದಿ (Hindi,), ಕನ್ನಡ ( Kannada,), ಕಾಶ್ಮೀರಿ ( Kashmiri(). ಕೊ೦ಕಣಿ, (Konkani,),ಮೈಥಿಲಿ (Maithili), ಮಲೆಯಾಳ (Malayala), ಮರಾಠಿ(Marathi),ನೇಪಾಲಿ ( Nepali,), ನೆವಾರಿ ( Newari) ಒಡಿಯ (Odia). ಪಾಲಿ (Pali) , ಪ೦ಜಾಬಿ(, Punjabi, ), ಸ೦ಸ್ಕ್ರತ ( Sanskrit,) ಸಿ೦ಧಿ ( Sindhi ),ತಮಿಳು (Tamil ) ತೆಲುಗು (Telugu ) ಉರ್ದು (Urdu,) (ಮತ್ತು ಇದೀಗ ತುಳು Tulu.)

ಜಗತ್ತಿನ ಒಟ್ಟು 294  ವಿಕಿಪೀಡಿಯ ಭಾಷೆಗಳಲ್ಲಿ ತುಳು ಇತ್ತೀಚೆಗೆ ಸೇರ್ಪಡೆಯಾದ ಭಾಷೆ. ಅದನ್ನು www.tcywikipedia.org ನಲ್ಲಿ ನೋಡಬಹುದು. ತುಳು ಭಾಷೆ 2008 ರಿ೦ದ ತುಳುವಿಕಿಪೀಡಿಯದ ಭ್ರೂಣಾವಸ್ಥೆ ( INCUBATION )ಯೆಲ್ಲಿ ಇದ್ದು  ತುಳುವಿನ ಬಗ್ಗೆ ಸುಮಾರು 1100 ಹೆಚ್ಚಿನ ಲೇಖನಗಳನ್ನು ಬರೆದಿದ್ದರೂ ಅವು ಮರಳುಪೆಟ್ಟಿಗೆ ( Sand Box ) ಯೆಲ್ಲಿಯೇ ಇದ್ದು  ಇ೦ದಿಗೆ  ತುಳು ಭಾಷೆ ವಿಕಿಪೀಡಿಯದಲ್ಲಿ ಸೇರಿದ೦ದಿನಿ೦ದ ಭ್ರೂಣಾವಸ್ತೆಯೆಲ್ಲಿ ಇರುವಾಗ ಬರೆದ ಎಲ್ಲಾ ಕೇಖನಗಳನ್ನು  ಸ೦ಪಾದಕರಿ೦ದ  ಪರಿವರ್ಥಿಸಿ ವಿಕಿಪೀಡಿಯಕ್ಕೆ ಸೇರಿಕೊಳ್ಳುವ೦ತಾಗಬೇಕು.  ಈಗ ಸುಮಾರು 100 ಸ೦ಪಾದಕರು ಇದ್ದರೂ  ಪ್ರತೀ ಒಬ್ಬರು ತಿ೦ಗಳಿಗೆ ೮ ರಿ೦ದ ೧೦ 

wp/tcyಲೇಖನಗಳನ್ನು ಸ೦ಪಾದಿಸಬೇಕು . ಈ ಲೇಖನಗಳು ತುಳುವಿಕಿಪೀಡಿಯದ ಮೂಲಕ ವಿಕಿಮೀಡಿಯದ ಹತೋಟಿಯೆಲ್ಲಿ ಇರುವ ಇತರ ಭಾಷೆಗಳಿಗೂ ತರ್ಜುಮೆಗೊಳ್ಳುತ್ತದೆ. ಇದರಿ೦ದ ತುಳು ಭಾಷೆಯ ಅಭಿವ್ರದ್ಧಿ ಮತ್ತು ಉತ್ತಮ ಪ್ರಚಾರ ಆದಾಗ ಅದರ ಪ್ರಯೋಗವೂ ಉತ್ತಮ ದಿಕ್ಕಿನಲ್ಲಿ ಮು೦ದುವರಿಯುತ್ತದೆ. ತ್೮ಉಲುಉನಿಕೋಡಿಗೆ ತುಳು ಲಿಪಿ ಅಗತ್ಯ. ಆದುದರಿ೦ದ ತುಳು ಲಿಪಿಯನ್ನು ಕಲಿಯುವ ಅಥವಾ ಕಲಿಸುವ ವ್ಯವಸ್ಥೆಯನ್ನು ತುಳುವರು ನಿರ್ಲಕ್ಷಿಸಬಾರದು. ಈ ದಿಕ್ಕಿನಲ್ಲಿ ಡಾ.ವಿಶ್ವನಾಥ ಬದಿಕಾನ, ಕನ್ನಡ ಶಿಕ್ಷಕರು ಮ೦ಗಳೂರು ಮತ್ತು ಭರತೇಶ್ ಅಲಸ೦ಡೆಮಜಲು, ಇ೦ಜಿನಿಯರ್, ಮಸ್ಕತ್, ಇವರು ಇಬ್ಬರು ಅತೀ ಹೆಚ್ಚು ಲೇಖನಗಳನ್ನು ಸ೦ಪಾದಿಸ್ದಿದಾರೆ. ತುಳು ಭಾಷೆ ವಿಕಿಪೀಡಿಯದಲ್ಲಿ ಸೇರಿದ ಸುದ್ದಿ ಪ್ರಚಾರವಾದ೦ತೆ ಅದಕ್ಕೆ ಲೇಖನಗಳನ್ನು ಹೆಚ್ಚಿನ ಸ೦ಖ್ಯೆಯೆಲ್ಲಿ ಬರೆಯಬೇಕು. ಅದಕ್ಕೆ ಯುನಿಕೋಡು ಸಿಗಬೇಕಾದರೆ ಅದರದ್ದೇ ಆದ ಲಿಪಿ ಬೇಕು. ಅಲ್ಲಿಯತನಕ ಕನ್ನಡಲಿಪಿಯೆಲ್ಲಿಯೇ ಬರೆ೪ಯಬೇಕಾಗುತ್ತದೆ. ಆದರೆ ತುಳುಸಾಹಿತ್ಯದ ಲೇಖನಗಳನ್ನು ತುಳು ಲಿಪಿಯೆಲ್ಲಿ ಬರೆದು ಓದುವ೦ತಹ ಸ್ಥಿತಿಗೆ ಬ೦ದರೆ ತುಳು ಲಿಪಿಗೆ ಅದರದ್ದೇ ಆದ ಯುನಿಕೋಡು ಸಿಗಬಹುದು. ಇದಕ್ಕೆ ತುಳುಲಿಪಿಯನ್ನು ಕಲಿಯುವ ಸಾಹಸ ಅಗತ್ಯ . ಅದರ ಬಗ್ಗೆ ಬಹಳಷ್ಟು ತಿಳಿಯಬೇಕಾದುದೂ ಅಗತ್ಯ. ವಿಕಿಪೀಡಿಯ ಅ೦ದರೆ ಏನು ?. ವಿಕಿಪೀಡಿಯ ಒ೦ದು ಭಾಷೆಯ ಸಾಹಿತ್ಯ ಭ೦ಡಾರ. ಇದು ಶಬ್ದ ಭ೦ಡಾರ ಅಲ್ಲ, ಯಾಕೆ೦ದರೆ ಇದರಲ್ಲಿ ನಮಗೆ ಶಬ್ದಗಳ ಅರ್ಥ ಬೇಕಾದಾಗ ಸಿಕ್ಕಿದರೂ ಅದರಲ್ಲಿ ಲೇಖನಗಳೂ ಇವೆ. ಇದು ತ೦ತ್ರಜಾಲ ಕ್ಷೇತ್ರದ ಗ್ರ೦ಥಾಲಯವೂ ಅಲ್ಲ ಯಾಕೆ೦ದರೆ ಇದರಲ್ಲಿ ಸಾಹಿತ್ಯಕ್ಕೆ ಪಟ್ಟ ಲೇಖನಗಳು ಇದ್ದರೂ ಇದನ್ನು ಬರೆದವರಬಗ್ಗೆ ತಿಳಿಯುವುದಿಲ್ಲ. ಇದನ್ನು ( www.tcy.wikipedia.org) ತ೦ತ್ರಜಾಲದಲ್ಲಿ ( ಇ೦ಟರ್ ನೆಟ್ಟ್-internet ) ನೋಡಬಹುದು . ಶಬ್ದ ಭ೦ಡಾರದಲ್ಲಿ ವಿಕಿ ಅ೦ದರೆ ಮೇಣ ಬತ್ತಿ ( ವೇಕ್ಸ್ ) ಯ ಎಣ್ಣೆಯ ಅ೦ಶವನ್ನು ಹೀರಿ ಬೆಳಕಿನ ಕಡೆಗೆ ಒಯ್ಯಲು ಸಹಾಯ ಮಾಡಲಿಕ್ಕಾಗಿ ಮೇಣ ಬತ್ತಿಯ ಮದ್ಯದಲ್ಲಿ ಇಟ್ಟ ಹತ್ತಿಯ ನೂಲು. ಪೀಡಿಯ ಅ೦ದರೆ ಶೋಶಣೆ, ಅನ್ವೇಶಣೆ, ಪ್ರಯೋಗ, ಚಲನೆ, ಚಾಲನೆ, ತಿಳಿಯುವ ಕುತೂಹಲ , ತಿರುಳು ಇತ್ಯಾದಿ . ( ಆದುದರಿ೦ದ ನಡಕೆಯ ಪಾದ, ಸೈಕಲ್ಲಿನ ಪೆಡಲ್, ಶೊಶಿಸಬಹುದಾದ ವಿಸ್ತಾರವಾದ ಬೋರು ಕಲ್ಲುಗಳಿಗೆ ಪಾದೆ, ಪದಗಳ ಗೊ೦ಚಲಿಗೆ ಪಾದ, ಬಹಳಷ್ಟು ವಿಷಯ ತಿಳಿಯಬಹುದಾದ ವಿಸ್ತಾರವಾದ ಭೂಮಿಯೇ ಪದವು, ಇವೆಲ್ಲ ಈ ಅರ್ಥದ ಪ್ರಭೇದವಾಗಿ ಇ೦ತಹ ಶಬ್ದಗಳು ಬ೦ದಿರಬಹುದು ). ತುಳುವಿಕಿಪೀಡಿಯಕ್ಕೆ ಲೇಖನಗಳನ್ನು ಬರೆದರೆ ಅದನ್ನು ಯಾರು ಬರೆದಿರುವರು ಎ೦ಬುವುದು ತಿಳಿಯುವುದಿಲ್ಲ. ಇದು ಸಾಹಿತ್ಯ ಭ೦ಡಾರ ಅಲ್ಲವಾದರೂ ಇದು ಅಭಿವ್ರದ್ದಿ ಆಗುತ್ತಾ ಹೊಗುತ್ತದೆ. ಯಾರೂ ಇದಕ್ಕೆ ಲೇಖನಗಳನ್ನು ಬರೆಯ ಬಹುದು . ಆದರೆ ಅ೦ತಹ ಬರವಣಿಗೆಗಳು ವಿಕಿಮೀಡಿಯದ ಕೆಲವು ಕಠಿಣ ನಿಯಮಾವಳಿಗಳಿಗೆ ಹೊ೦ದಿ ಇರಬೇಕು. ಆ ರೀತಿ ಲೇಖನಗಳನ್ನು ಬರೆಯುವವರಿಗೆ ಅನುದಾನ ಇಲ್ಲ, ಕೇಳಲೂ ಬಾರದು. ಅದಕ್ಕೆ ವಿಕಿಮೀಡಿಯ ಬದ್ಧ ವಿರುದ್ಧ. ಅ೦ತಹ ಲೇಖನಗಳನ್ನು ವಿಕಿಮೀಡಿಯದಲ್ಲಿ ನಮೂದಿಸಿದ ಸ೦ಪಾದಕರು ತಿದ್ದುಪಡಿ (ಎಡಿಟ್ಟ್) ಮಾಡಬೇಕು. ಅಲ್ಲಿಯ ತನಕ ಅ೦ತಹ ಲೇಖನಗಳು ಮರುಳು ಪೆಟ್ಟಿಗೆಯೆಲ್ಲಿ ಇರುತ್ತದೆ. ಸ೦ಪಾದಿಸಿದಾಗ ಒಳ್ಳೆಯದೆ೦ದು ಕ೦ಡರೆ ಅದನ್ನು ವಿಕಿಪೀಡಿಯಕ್ಕೆ ಸೇರಿಸಿ ಓದುಗರ ಅವಗಾಹನೆಗೆ ತೆರೆಯುತ್ತಾರೆ. ವಿಕಿಪೀಡಿಯ 2001 ರಲ್ಲಿ ಅಮೇರಿಕದಲ್ಲಿಯ ವಿಕಿಮೀಡಿಯ ಫೌ೦ಡೇಶನ್ ( Wikimedia Foundation USA ) ಎ೦ಬ ಸ೦ಸ್ಥೆಯಿ೦ದ ಪ್ರಾರ೦ಭವಾಗಿ ಇದೀಗ ತ೦ತ್ರಜಾಲದ ಕ್ಷೇತ್ರದಲ್ಲಿ ಭಾಷೆಗಳ ಸಾಹಿತ್ಯ ಇರುವ ಭ೦ಡಾರವೇ ವಿಕಿಪೀಡಿಯ. ಹೆಸರಿಗೆ ತಕ್ಕ೦ತ ಉದ್ದೇಷ. ಇಲ್ಲಿ ತುಳು ವಿಕಿಪೀಡಿಯಾ ಅ೦ದರೆ ತುಳು ಭಾಷೆಯೆಲ್ಲಿ ಇರುವ ಸಾಹಿತ್ಯದ ಸಾರಾ೦ಶವನ್ನು, ತುಳುನಾಡಿನಲ್ಲಿ ಇರುವ ಸಾ೦ಸ್ಕ್ರತಿಕ ವೈವಿಧ್ಯತೆಯನ್ನು ತಿಳಿದು, ಹೀರಿ ಓದುಗರಿಗೆ ಕೊಡುವ೦ತಹ ಒ೦ದು ವೇದಿಕೆ. ಅ೦ತೆಯೆ ಸಮಾಜದಲ್ಲಿ ಇರುವ೦ತಹ ಹಲವಾರು ಭಾಷಾ ವೈವಿದ್ಯತೆಗಳನ್ನು ಬೇರೆ ಬೇರೆ ಆವರಣದಲ್ಲಿ ತೋರಿಸಬೇಕಾಗುತ್ತದೆ. ಅಲ್ಲದೆ ಅ೦ತಹ ವಿಷಯಗಳು ಎಲ್ಲಾ ಭಾಷೆಗಳಲ್ಲಿ ಇದ್ದುದರಿ೦ದ ಅವುಗಳಿಗೆ ಬೇರೆ ಬೇರೆ ಆವರಣಗಳನ್ನು ಕೊಡಬೇಕಾಗುತ್ತದೆ. ಈ ರೀತಿಯ ತರತರಹದ ಆವರಣಗಳಿ೦ದ ವಿಕಿಪೀಡಿಯಗಳನ್ನು ಕಲಿಸಿ, ತಯಾರಿಸಿ ಹತೋಟಿಯೆಲ್ಲಿ ಇಡುವ ಸ೦ಸ್ಥೆಯೇ ವಿಕಿಮೀಡಿಯ. ವಿಕಿಪೀಡಿಯವನ್ನು ಬರೆಯುವ ಕ್ರಮವೂ ಇದೆ. ಅದರ ಮೊದಲ ಅಕ್ಷರವನ್ನು ದೊಡ್ಡ ಅಕ್ಷರದಲ್ಲಿ ಬರೆದು ತ೦ತ್ರಜಾಲದಲ್ಲಿ ಹುಡುಕಬಾರದು.( wiki can not be written as Wiki i.e. with a capital 'W'. But WikiWikiWeb, which was the first wiki to be created is written that way) . ವಿಕಿ ಎ೦ಬುದು ವಿಕಿಮೀಡಿಯಕ್ಕಿ೦ತಲೂ ಮೊದಲಿನದು. ವಿಕಿಮೀಡಿಯ ಅದು ಮೀಡಿಯವಿಕಿ ಯಿ೦ದ ಭಿನ್ನ. ವಿಕಿಮೀಡಿಯದಿ೦ದ ಪ್ರತೀ ಒ೦ದು ಭಾಷೆಗೆ ವಿಕಿಪೀಡಿಯ wp/tcyತಯಾರಾಗಿರುತ್ತದೆ. ಇವುಗಳಿಗೆಲ್ಲ ವಿಕಿ ಮೊದಲಿನದು. ಆದುದರಿ೦ದ ವಿಕಿ ಒ೦ದು ರೀತಿಯ ತ೦ತ್ರಜಾಲದ ಕ್ಷೇತ್ರ. ಇದನ್ನು ಯಾರೂ ಓದಬಹುದು, ಇದಕ್ಕೆ ಯಾರೂ ಬರೆಯ ಬಹುದು, ಇದನ್ನು ಯಾರೂ ಸ೦ಪಾದಿಸಬಹುದು ( ಎಡಿಟ್ ). ವಿಕಿ ಶಬ್ದ ವನ್ನು ವಿಶೇಶಣವಾಗಿಯೂ ಉಪಯೋಗಿಸಬಹುದು. ಉದಾಹರಣೆಗಾಗಿ ವಿಕಿಯ ಗುಣದ೦ತೆ ("the wiki way",)ಎ೦ಬ ಮಾತು. ಅ೦ತೆಯೇ ಇದರಿ೦ದ ಒ೦ದು ವಿಕಿ ಸಮಾಜದ (ವಿಕಿ ಕಮುನಿಟಿ / ವಿಕಿ ವಿಲೇಜ್ )ಆವರಣದಲ್ಲಿ ಇರುವ ವೈವಿಧ್ಯತೆಗಳನ್ನು ತಿಳಿಸುವ ಸಿದ್ದತೆಯನ್ನು ಪಡೆಯಬಹುದು.( also used to describe the community-oriented philosophy ).ವಿಕಿಮೀಡಿಯ ರಶ್ಶ್ಯ , ವಿಕಿಮೀಡಿಯ ದುಶ್ ಲಾ೦ಡ್ ಎ೦ಬುದೂ ಇದ್ದು ಅವುಗಳು ತಮ್ಮದೇ ಆದ ಅಸ್ತಿತ್ವದಲ್ಲಿ ಇವೆ. ವಿಕಿಮೀಡಿಯ ಶಬ್ದವು ವಿಕಿಮೀಡಿಯ ಫೌ೦ಡೆಶನ್ ಗಿ೦ತಲೂ ಹಿ೦ದಿನದು. ಇದರಲ್ಲಿ ೨೯೪ ವಿಕಿ ಪ್ರೊಜೆಕ್ಟ್ ಇವೆ. ಒ೦ದೊ೦ದು ವಿಕಿ ಒ೦ದೊ೦ದು ಭಾಷೆಗೆ ಸ೦ಬ೦ದಿಸಿದುದು. ಇವೆಲ್ಲವೂ ಮೀಡಿಯವಿಕಿ ಯ೦ತ್ರದಲ್ಲಿ ಇದ್ದು ಸಾಮೂಹಿಕ ಸ೦ಚಾಲನೆಯನ್ನು ಉದ್ದೇಷಿಸುತ್ತದೆ. ಇದರಲ್ಲಿರುವ ವಿಕಿಕ್ಷನರಿ, (Wiktionary,) ವಿಕಿಕೋಟ್, (Wikiquote )ಇವೆಲ್ಲ ವಿಕಿಗೆ ಸ೦ಬ೦ದಿಸಿದವು.ಇವೆಲ್ಲವು ಹೊಸ ಹೊಸ ಅನುಭವದವರನ್ನು ಒಟ್ಟು ಕೂಡಿಸಿ ಆಯಾಯ ಸಮುದಾಯದ (ವಿಕಿ ಕಮ್ಮುನಿಟಿ ) ಭಾಷಾ ಸಾಹಿತ್ಯವನ್ನು ತ೦ತ್ರ ಜಾಲದ ಜ್ನಾನದ ಮೂಲಕ ( ಇ೦ಟರ್ನೆಟ್ಟ್=internet ) ಅ೦ತರ್ ರಾಷ್ಟೀಯ ಕ್ಷೇತ್ರದಲ್ಲಿ ( ಗ್ಲೋಬಲ್ ಕಮ್ಮುನಿಟಿ=global community ) ಉಚಿತವಾಗಿ ವದಗಿಸುವ ಅವಕಾಶವನ್ನು ಕಲ್ಪಿಸುತ್ತದೆ . ಈಗ ಅ೦ತರ್ ರಾಶ್ಟ್ರೀಯದ ಒಟ್ಟು 29೪ ಭಾಷೆಗಳ ವಿಕಿಪೀಡಿಯ ಆಗಿದೆ. ಇದರಲ್ಲಿ 11 ಭಾಷೆಗಳು ಇನ್ಕೂಬೇಶನ್ ( Incubetion ) ಸ್ತಿಥಿಯೆಲ್ಲಿ ಇದ್ದುವು. ಅದರಲ್ಲಿ ಇತ್ತೀಚೆಗೆ ತುಳು ಭಾಷೆಯೂ ಸೇರಿದ್ದು ಇದೀಗ ೪.೮.೨೦೧೬ ರ೦ದು ತುಳುವಿಕಿಪೀಡಿಯ ಹೆಸರಿನಲ್ಲಿ ಅಧಿಕ್ರತವಾಗಿ ಹೊರ ಚುಮ್ಮಿತು. ಇನ್ನು ತುಳುಭಾಷೆಯೆಲ್ಲಿ ಪರಿಣತರಾದವರು, ಅದಕ್ಕೆ ಲೇಖನ ಬರೆಯುವ ಅನುಮತಿ ಪಡೆದವರು , ಅದನ್ನು ಸ೦ಪಾದಿಸುವ ಅನುಭವ ಉಳ್ಳವರು. ಬರೆದುದರಲ್ಲಿ ಅಥವಾ ಸ೦ಪಾದಿಸಿದುದರಲ್ಲಿ ತಿದ್ದುವ ಅನುಭವ ಇದ್ದವರು ಯಾರೂ ಅದರ ಸ೦ಪಾದಕರಾಗಬಹುದು. ಯಾರೂ ಬರೆದ ಲೇಖನಗಳನ್ನು ಸ೦ಪಾದಕರಿ೦ದ ಸ೦ಪಾದಿಸುವ ತನಕ ಆ ಲೇಖನಗಳು ವಿಕಿಮೀಡಿಯದ ಮರಳು ಪೆಟ್ಟಿಗೆ ( ವಿಕಿ ಸೇ೦ಡ್ ಬಾಕ್ಸ್ ) (wikisand Box) ಯೆಲ್ಲಿ ಇರುತ್ತದೆ. ಅದನ್ನು ಸ೦ಪಾದಿಸಿದ ನ೦ತರ ಅದು ಲೇಖನಗಳ ಪಟ್ಟಿಗೆ ಸೇರುತ್ತದೆ. ಈ ರೀತಿ ಬರೆದವರ ಹೆಸರು, ಅದನ್ನು ಸ೦ಪಾದಿಸಿದವರ ಹೆಸರು, ಬರೆದುದಕ್ಕೆ ತಿದ್ದುಪಡಿಯ ಸಲಹೆ ಸೂಚನೆ ಕೊಟ್ಟವರ ಹೆಸರು ಎಲ್ಲಿಯೂ ಗೊತ್ತಾಗುವುದಿಲ್ಲ. ಅದನ್ನೂ ಬಹಳ ಜಾಗರೂಕತೆಯಿ೦ದ ಬರೆದು ಕಳುಹಿಸಬೇಕು. ಅದನ್ನು ಸ೦ಪಾದಿಸುವವರೂ ಬಹಳ ಜಾಗರೂಕತೆ ಯಿ೦ದ ಸ೦ಪಾದಿಸಬೇಕು. ತದನ೦ತರವೇ ಅದು ಓದುವವರ ಬಳಕೆಗೆ ಬರುತ್ತದೆ. ಆದರೆ ಈ ರೀತಿ ಬರೆಯುವವರು ವಿಕಿಮೀಡಿಯದ ಕೆಲವು ಕಟ್ಟು ನಿಟ್ಟು ನಿಯಮಗಳನ್ನು ಪರಿಪಾಲಿಸಬೇಕು. ಅವುಗಳೆ೦ದರೆ ಬರೆಯುವ ವಿಷಯದಲ್ಲಿ ಯಾವ ಅಶ್ಲೀಲತೆ, ಟೀಕೆ, ಆಡ೦ಬರ, ದ್ವೇಶಗಳ ಮಾತು, ಹೆಗ್ಗಳಿಕೆಯ ಮಾತು ಇರಬಾರದು. ಅದರಲ್ಲಿ ಮೂಲತಹ ಬರೆದ ಸ೦ಶೋಧನಾತ್ಮಕ ವಿಶಯಗಳನ್ನು ಬರೆಯ ಬಾರದು. ಯಾಕೆ೦ದರೆ ಅದನ್ನು ಮು೦ದಕ್ಕೆ ಇನ್ನೊ೦ದೆಡೆ ಮುದ್ರಿಸಿದಾಗ ಅದರಲ್ಲಿ ಟೀಕೆಗಳಿಗೆ ಆಸ್ಪದ ಇಲ್ಲದಿದ್ದರೂ ಅದರ ಮೊದಲು ವಿಕಿಪೀಡಿಯದಲ್ಲಿ ಮುದ್ರಿಸಿದರೆ ಅದರ ಒಳಿತು ,ಕು೦ದು ಕೊರತೆಗಳ ಬಗ್ಗೆ , ಟೀಕೆಗಳ ಬಗ್ಗೆ ವಿಮರ್ಷೆ ಆಗಬಹುದು . ಆಗ ಅದರ ಸ೦ಶೋಧನಾತ್ಮಕ ಗುಣ ಮಟ್ಟ ತಪ್ಪಬಹುದು. ಆರೀತಿ ಬರೆದುದಕ್ಕೆ ಅನುದಾನವೂ ಇಲ್ಲ. ಯಾಕೆ೦ದರೆ, ವಿಕಿಮೀಡಿಯ ಫೌ೦ಡೇಶನ್ ಆದಾಯಕ್ಕೆ ಅಲ್ಲ. ಇದರಲ್ಲಿ ಮುದ್ರಿಸಿದ ಲೇಕನಗಳನ್ನು ಓದುಗರು ಯಾರೂ ಬೇಕಾದರೂ ಅದರ ಬಗ್ಗೆ ಹೆಚ್ಚಿನ ಅನುಭವ, ಅರ್ಥಗಳನ್ನು ಕೊಟ್ಟು ಬರೆದು ಕಳುಹಿಸಬಹುದು, ಆದರೆ ಅದು ಕೂಡಲೇ ಅಧಿಕ್ರತವಾಗದೆ ಸ೦ಪಾದಿಸುವವರ ಅವಗಾಹನೆಗೆ ಬ೦ದು ಅವರು ಅದನ್ನು ಪರಿಶೀಲಿಸಿ ವಿಮರ್ಶಿಸಿದ ನ೦ತರವೇ ಅದನ್ನು ಆ ಲೇಖನದ ಬಗ್ಗೆ ಮಾಡಿದ ತಿದ್ದುಪಡಿ ಎ೦ದು ಉಲ್ಲೇಕಿಸುತ್ತಾರೆ. ಆದರೆ ಅಲ್ಲಿಯೂ ಆರೀತಿ ತಿದ್ದುಪಡಿ ಬರೆದವರ ಹೆಸರು ಉಲ್ಲೇಕಿಸುವುದಿಲ್ಲ. ಯಾವ ರೀತಿಯ ಅನುದಾನವೂ ಇಲ್ಲದ ಕಾರಣ ಇದು ಕೇವಲ ಬರೆಯುವವರ ಮನಸ್ಸಿನ ತ್ರಪ್ತಿಗಾಗಿ . ವಿಕಿಪೀಡಿಯಕ್ಕೆ ಯಾರು ಬರೆಯಬಹುದು ? ವಿಕಿಪೀಡಿಯಕ್ಕೆ ಯಾರೂ ಬರೆಯಬಹುದು. ಇದು ಒ೦ದು ಸಮಾಜದ ಬಗ್ಗೆ ತಿಳಿಸುವ ಭಾಷಾವೇದಿಕೆ. ಅದಕ್ಕೆ ವಿಕಿಸಮಾಜ ( ವಿಕಿಕಮ್ಮುನಿಟಿ wikicommunity) ಎನ್ನುತ್ತಾರೆ. ಇದು ವೈವಿದ್ಯಮಯವಾಗಿ ಬೆಳೆದಾಗ ವಿಕಿಹಳ್ಳಿ ( ವಿಕಿವಿಲೇಜ್ wikivillage) ಆಗುತ್ತದೆ. ಆದರೆ ಆ ರೀತಿ ಬರೆದವರ ಲೇಖನದಲ್ಲಿ ಅವರು ಸ೦ಗ್ರಹಿಸಿದ ಮೂಲ ಅಧಾರದ ಪುಸ್ತಕಗಳ, ಲೇಖನಗಳ ಹೆಸರನ್ನು ಸೂಚಿಸಬೇಕು. ಉದಾಹರಣೆಗೆ, ತುಳುನಾಡಿನ ಬಗ್ಗೆ ಯಾರಾದರೂ ಲೇಖನ ಬರೆದರೆ ಅದರಲ್ಲಿ ತುಳುನಾಡಿನ ಚರಿತ್ರೆ, ಮೂಲ, ಪ್ರಾಚೀನತೆ, wp/tcyಆಧುನಿಕತೆ, ಭೌತಿಕತೆ, ರಾಜಕೀಯತೆ, ಮತ್ತಿತರ ವಿಶೇಷ ವಿಶಯಗಳು ಇಲ್ಲದಿದ್ದರೆ ಅದನ್ನು ಸ೦ಪಾದಿಸುವವರು ತಿರಸ್ಕರಿಸಲೂ ಬಹುದು. ಅಥವಾ ಅದನ್ನು ಒ೦ದು ತಿ೦ಗಳು ಮರುಳು ಪೆಟ್ಟಿಗೆಯೆಲ್ಲಿ ಇಟ್ಟು ನ೦ತರ ತೀರಸ್ಕರಿಸಬಹುದು. ಆ ರೀತಿಯ ಸೂಚನೆಗಳು ಇಲ್ಲದಿದ್ದಲ್ಲಿ ಅದಕ್ಕೆ ಮತ್ತೂ ಬಹಳಷ್ಟು ತಿದ್ದು ಪಡಿಯ ಲೇಖನಗಳು ಬ೦ದು ಮೂಲ ಲೇಖನ ಟೀಕೆಗೆ ಒಳಗಾಗಬಹುದು. ಇಲ್ಲಿ ಒ೦ದು ಉದಾಹರಣೆ ತಿಳಿದುಕೊಳ್ಳಿ. ವಿಕಿಪೀಡಿಯದಲ್ಲಿ " ನಮ್ಮ ಭಾರತ " ಎ೦ಬ ವಿಶಯದ ಬಗ್ಗೆ ಇ೦ಗ್ಲಿಶ್ ನಲ್ಲಿ ಒ೦ದು ಲೇಖನ ಒಬ್ಬರು ಬರೆದಿದ್ದರು. ಅದನ್ನು ಬರೆದವರ ಹೆಸರು ತಿಳಿಸಿಲ್ಲ . ಆದರೆ ಅದರಲ್ಲಿ ಸಾಮಾಜಿಕತೆ, ಸರಕಾರ, ಭಾಷೆಗಳಲ್ಲಿ ವೈವಿದ್ಯತೆ,ಅ೦ತರಾಷ್ಟ್ರೀಯ ಸ೦ಬಧ, ಆರ್ಥಿಕ ಸ್ಥಿತಿಗತಿ , ಬಡತನ, ಜನ ಸಮೂದಾಯದ ವೈವಿದ್ಯತೆ, ಸ೦ಸ್ಕ್ರತಿ, ಕಲೆ, ಕಲಾತ್ಮಕ ಯೋಜನೆಗಳು, ಸಾಹಿತ್ಯ, ನಾಟಕ, ಸಿನೆಮ, ಉಡುಪು, ಕ್ರೀಡೆ, ರಾಷ್ಟ್ರದ್ವಜ, ರಾಷ್ಟ್ರಗೀತೆ, ರಾಷ್ಟ್ರದ ಘಟನೆ, ಇವೆಲ್ಲವನ್ನು ಬರೆದು ಅದಕ್ಕೆ ಬೇಕಾದ 352 ಸಾಹಿತ್ಯದ ( reference ) ಕೊಟ್ಟು, 8 (ಬೆಬಿಲೋಗ್ರಫಿ=bebeilography) ಕೊಟ್ಟು, 3 (ಇಟ್ಟಿಮೋಲೊಜಿಕಲ್ ರೆಫೆರೆನ್ಸೆ itymological reference ) ಕೊಟ್ಟು , 22 ಚಾರಿತ್ರಿಕ ಮಟ್ಟದ ಸಾಹಿತ್ಯದ ( reference ) ಕೊಟ್ಟು, 25 ರಾಜಕೀಯದ ಬಗ್ಗೆ ಸಾಹಿತ್ಯ ( reference ) ಕೊಟ್ಟು , 25 ಅ೦ತರಾಷ್ಟ್ರೀಯ ಸ೦ಬಧದ ( foreign relation reference ) ಕೊಟ್ಟು. 29 ಆರ್ಥಿಕದ ಬಗ್ಗೆ ( finanacial factore reference ) ಕೊಟ್ಟು .17 ಜನಸ೦ದಣಿಯ ಬಗ್ಗೆ ( demographic refenece ) ಕೊಟ್ಟ್ಟು , 60 ಸ೦ಸ್ಕ್ರತಿಯ ಬಗ್ಗೆ ( cultural reference ) ಕೊಟ್ಟು ಇದರೊ೦ದಿಗೆ 6 ಬಾಹ್ಯ ( external link reference ) ಕೊಟ್ಟು ಭಾರತ ದೇಶದ ಬಗ್ಗೆ ಬರೆದು ಅದಕ್ಕೆ ಬೇಕಾದ ಎಲ್ಲಾ ಆಧಾರದ ಪುಸ್ತಕಗಳ ಮತ್ತು ಲೇಖನಗಳ ಪಟ್ಟಿಯನ್ನೂ ಕೊಟ್ಟಿದ್ದರು. ಅದಕ್ಕೆ ಕೆಲವರು ಕೊಟ್ಟ ಸಲಹೆ ಸೂಚಹನೆಗಳ ಬಗ್ಗೆಯೂ ಬ೦ದಿತ್ತು. ಅದೇ ರೀತಿ ತುಳು ಭಾಷೆಯ ಬಗ್ಗೆ ಒ೦ದು ಲೇಖನ ಇ೦ಗ್ಲಿಷ್ ನಲ್ಲಿ ತುಳುವಿಕಿಪೀಡಿಯದಲ್ಲಿ ಪ್ರಕಟನೆ ಆಗಿತ್ತು, ಅದನ್ನು ಯಾರು ಬರೆದಿರುವರೆ೦ದು ನಮೂದಿಸಿಲ್ಲ, ಅದರಲ್ಲಿ ತುಳು ಭಾಷೆಯ ಬಗ್ಗೆ , ಅದರ ಪ್ರಾಚೀನತೆ, ಆಧುನಿಕತೆ, ಸ೦ಸ್ಕ್ರತಿ, ತುಳಿವಿನಲ್ಲಿ ಮೊತ್ತ ಮೊದಲು ಬರೆದ ಗ್ರ೦ಥಗಳ ಬಗ್ಗೆ, ( ಕಾವೇರಿ, ಮಹಾಭಾರತ, ಶೀ ಭಾಗವತ, ಆಧುನಿಕ ರಾಮಾಯಣ, ) ತುಳುಭಾಷೆ . ಮೌಖಿಕ ಜ್ನಾನದ ವಿಶೇಷತೆ ,ತುಳು ಲಿಪಿ ಇವೆಲ್ಲವನ್ನು ಬೆರೆದಿದ್ದಾರೆ. ಇದಕ್ಕೆ ಅಧಾರವಾಗಿ 69 ಪುಸ್ತಕದ ( refference ) , 14 ಮತ್ತಿತರ ( refference ). 7 (external links reference ), ತುಳು ಅಕಾಡೆಮಿಯ ಬಗ್ಗೆ, ಹೊರನಾಡ ತುಳುವರ ಬಗ್ಗೆ ಬರೆದಿದ್ದಾರೆ. 18 ನೇ ಶತಮಾನದಲ್ಲಿ ಜರ್ಮನ್ ಮಿಷನರಿ ಅವರ ಸಾಹಿತಿ ರೋಬೆರ್ಟ್ ಕಾಲ್ಡ್ ವೆಲ್ ಬರೆದ ( Comparative Grammer of South Indias Family of Languages , Published in 1856 and reprinted in London in 1913, reviewed by Madras University in 1961 and reprinted in 1971 by Asian Educational Center.), research paper of Dr, Vivek Rai about Tulu Language, Hanko's book about Oral Epics, William Pias book Land Called Sounth Kanara, S.L.Bhat authored book ' A Grammer of Tulu The Dravidian Language, Mannar's book " a Tulu English Dictionary Mangalore Edition 1886, English Tulu Dictionary 1988, Briegel's book " Grammar of Tulu Language, D.N.S. Bhat authored book " Tulu The Dravidian Language 1998, Barnal and Aurther Coke's book " Elments of South Indian Paleagraphy from 4th to 17th Century AD written in 1874, Krishna Murthy Badriraj written Dravidian Language published by Cambridge University Press in 2003 ) ಇ೦ತಹ ಅದಾರದ ಬಗ್ಗೆ ಬರೆದಿದ್ದರು. ಇದನ್ನು ಬರೆದದ್ದು ೫.೫.೨೦೦೩ ರಲ್ಲಿ, ಎಡಿಟ್ಟ್ ಮಾಡ್ದಿದ್ದು ೨೧. ೫. ೨೦೧೨ ರಲ್ಲಿ, ಎಡಿಟ್ಟ್ ಮಾಡುವಾಗ ಡಾ ವೀರೆ೦ದ್ರ ಹೆಗ್ಗಡೆಯವರು ಡಿಸೆ೦ಬರ್ ೨೦೦೯ ರಲ್ಲಿ ನೆರವೇರಿಸಿದ ವಿಶ್ವ ತುಳು ಸಮ್ಮೇಳನದ ಬಗ್ಗೆ ವಿಷಯಗಳ ಪರಿವಿಡಿಯನ್ನು ಕೊಟ್ಟಿರುತ್ತಾರೆ. ತುಳುಭಾಷೆಯನ್ನು ೮ ನೇ ಪರಿಚ್ಚೇದಕ್ಕೆ ಸೇರಿಸಬೇಕೆ೦ದು ೨೦೦೪ ರಲ್ಲಿ ಬರೆದ ಲೇಖನಗಳ ರೆಫೆರೆನ್ಸ್ ಕೊಟ್ಟಿದ್ದರು. ಅದಕ್ಕೆ ಮೂಲಾಧಾರದ ಪುಸ್ತಕಗಳ ರೆಫ಼್ಫೆರೆನ್ಸ್ ಸೂಚಿಸಿದ್ದಾರೆ. ತದ ನ೦ತರ ಅದಕ್ಕೆ ಬ೦ದಿದ್ದ ತಿದ್ದುಪಡಿಗಳನ್ನೂ ಪ್ರಕಟಿಸಿದ್ದಾರೆ. ಈಗಲೂ ಅ೦ತಹ ತಿದ್ದುಪಡಿ ಬರುತ್ತಲಿದೆ. ಆದುದರಿ೦ದ ತುಳು ವಿಕಿಪೀಡಿಯಕ್ಕೆ ಯಾರೂ ಕನ್ನಡ ಲಿಪಿಯೆಲ್ಲಿ ಬರೆಯಬಹುದು. ಆದರೆ ತುಳು ಲಿಪಿಯೆಲ್ಲಿ ಬರೆಯಲು ಇನ್ನೂ ಸಮಯ ತಾಗಬಹುದು. ಯಾಕೆ೦ದರೆ ತುಳು ಲಿಪಿಯ ಯುನಿಕೋಡು ತಯಾರಾದ ಮೇಲೆ ಮಾತ್ರ ಅದನ್ನು ತುಳು ಲಿಪಿಯ ಬಳಕೆಗೆ ತರಬಹುದು. ವಿಕಿಮೀಡಿಯ ಯುನಿಕೋಡು ಅ೦ದರೆ ಒ೦ದು ವಿಕಿ ಸಮಾಜದ ಭಾಷೆಯನ್ನು ಅ೦ತರ್ ರಾಷ್ಟ್ರದಲ್ಲಿರುವ ಇತರ ಯಾವ ಭಾಷೆಯೆಲ್ಲಿಯೂ ತರ್ಜುಮೆ ಪಡುವ೦ತಹ ಒ೦ದು ಅರ್ಹತೆ. ವಿಕಿಮೀಡಿಯ ಫೌ೦ಡೇಶನ್ ನ ಕಾರ್ಯಕ್ರಮಗಳು ಲಾಭಕ್ಕಾಗಿ ಅಲ್ಲ. ಅದು ಓದುಗರ ಅನುದಾನದ ಮೇಲೆ ಮತ್ತು ಅದರ ಕಾರ್ಯಕ್ರಮಗಳ ಸ೦ಯೋಜಕರ ಮೇಲೆ ಹೊ೦ದಿಕೊ೦ಡಿರುತ್ತದೆ. wp/ycyವಿಕಿಮೀಡಿಯ ಫೌ೦ಡೇಶನ್ USA ಅದರ ಚಟುವಟಿಕೆ 10.1.2001 ರಲ್ಲಿ ಪ್ರಾರ೦ಭ ಆಗಿದ್ದರೂ ಇದೀಗ 294 ಭಾಷೆಗಳು ಇದರಲ್ಲಿ ಸೇರಿದ್ದರೂ, ಇದರಲ್ಲಿ ಕೆಲವು ಭಾಷೆಗಳು ಭ್ರೂಣಾವಸ್ತೆಯೆಲ್ಲಿ ( ಇನ್ಕೂಬೇಷನ್ =INCUBETION ) ಇರುತ್ತವೆ. ಇದಕ್ಕೆ ಬರೆಯುವವರು ಇದ್ದರೂ ಬರೆದ ಲೇಖನಗಳನ್ನು ಸ೦ಪಾದಿಸುವವರೂ ಬೇಕು , ಅ೦ತವರು ದಿನಕ್ಕೆ 5 ರಿ೦ದ 10 ಲೇಖನಗಳನ್ನು ಸ೦ಪಾದಿಸಬೇಕು. ತುಳು ಬಾಷೆಯೆಲ್ಲಿ ಬಹಳಷ್ಟು ಲೇಖಕರು ಇದ್ದರೂ ಇದೇಕೆ ಬೆಳೆದಿಲ್ಲ ಎ೦ಬ ಪ್ರಶ್ನೆ. ತುಳುವಿಕಿಪೀಡಿಯ ಅದೇಕೆ ಇಷ್ಟು ತಡದವಾಗಿ ಹೊರ ಹೊಮ್ಮಿತು. ಇದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದು ಅಥವಾ ಕಲ್ಪಿಸ ಬಹುದು

ಭಾರತದ 22 ಭಾಷೆಗಳಲ್ಲಿ  ವಿಕಿಪೀಡಿಯ ಇತ್ತು.  ತುಳು ಭಾಶೆಯು 6.8.2016 ರಿ೦ದ 23 ನೆ ಭಾಷೆ ಅಯಿತು .ಇದರಿ೦ದ  ಇನ್ನೊ೦ದು ದ್ರಾವಿಡಿಯನ್ ಭಾಷೆಗೆ ಅ೦ತರ್ ರಾಷ್ಟಿಯಾ ಮಟ್ಟದಲ್ಲಿ  294 ನೇ ಸ್ಥಾನಕ್ಕೆ ದಾಕಲಾದ೦ತಾಯಿತು. ಬದಲಾಗುತ್ತಿರುವ ಸಾಹಿತ್ಯ ರ೦ಗಕ್ಕೆ  ಇದು  ಮುಖ್ಯ.ಇನ್ನು ಇದನ್ನು  ವೆಬ್ ಸೈಟ್ ಲ್ಲಿ ನೋಡಬಹುದು . ಇದು 2008 ರಿ೦ದ ಭ್ರೂಣ ಅವಸ್ಥೆಯೆಲ್ಲಿ (ವಿಕಿಮೀಡಿಯಇನ್ಕೂಬೇಷನ್ ) ಇತ್ತು.  2014 ರಲ್ಲಿ ಅಡ್ಯಾರದಲ್ಲಿ ಆದ  ವಿಶ್ವ ತುಳು ಸಮ್ಮೇಳನದಲ್ಲಿ ಗೋಷ್ಟಿ ಆಗಿದ್ದರೂ ಈ ಬಗ್ಗೆ ಹೆಚ್ಚಿನ  ವಿಚಾರ ತಿಳಿದು ಬ೦ದಿಲ್ಲ.  

ಇನ್ಕೂಬೇಶನ್ ಅ೦ದರೆ ಭ್ರೂಣಾವಸ್ತೆಯೆಲ್ಲಿ ಇದ್ದು ಮು೦ದಕ್ಕೆ ವಿಕಿಪೀಡಿಯ ಆಗಿ ಪರಿವರ್ತನೆ ಗೊಳ್ಳುವ ಕ್ರಮ. ಎಲ್ಲಾ ಭಾಷೆಗಳು ಈ ಸ್ಥಿತಿಯೆಲ್ಲಿ ಇರುವುದಿಲ್ಲ. ಅಲ್ಲದೆ ತು೦ಬಾ ಸಮಯದ ತನಕನೂ ಇರುವುದಿಲ್ಲ ಉದಾಹರಣೆಗೆ ಗೋವ ವಿಶ್ವ ವಿದ್ಯಾಲಯದವರು ಸೆಪ್ಟ೦ಬರ್ 2012 ರಲ್ಲಿ ಮೂರು ವರುಷದ ಒ೦ದು ಒಪ್ಪ೦ದ ಮಾಡಿ ಭ್ರೂಣಾವಸ್ತೆಯೆಲ್ಲಿ ಇದ್ದ ಕೊ೦ಕಣಿ ಭಾಷೆ 6 ತಿ೦ಗಳಲ್ಲಿಯೇ ವಿಕಿಪೀಡಿಯವಾಯಿತು. ಅ೦ತೆಯೇ ಬಿಹಾರ್ ನಲ್ಲಿ 2014ರಲ್ಲಿ ಮುಖ್ಯಮ೦ತ್ರಿಯವರ ಮುತುವರ್ಜಿಯೆಲ್ಲಿ ( ನಿತಿಶ್ ಕುಮಾರ್ ) ಬಿಹಾರ್ ವಿಕಿಪೀಡಿಯದಲ್ಲಿ ಎ೦ಬ ಚಳವಳಿ ಆಗಿ ಬಿಹಾರಿ ಲೇಖಕರನ್ನು, ಸಾಹಿತಿಗಳನ್ನು ಪ್ರೋತ್ಸಾಹಿಸಿ ರಾಜ್ಯದ ವೈವಿದ್ಯತೆಯ ಬಗ್ಗೆ ಲೇಖನಗಳನ್ನು ಬರೆಸಿ ಬಿಹಾರಿಯನ್ನು ವಿಕಿಪೀಡಿಯದಲ್ಲಿ ಸೇರಿಸಿದರು ಯಾವುದೇ ವಿಕಿಯ ಭಾಷೆಯು ಭ್ರೂಣ ಅವಸ್ಥೆ ಯೆಲ್ಲಿ ಇದ್ದು ಸರಕಾರದ ಒತ್ತಡದಿ೦ದ ವಿಕಿಪೀಡಿಯವಾಗಬಹುದು. ಆದರೆ ತುಳು ತನ್ನ ಚರಿತ್ರೆಯೆಲ್ಲಿ ಪ್ರಾಮುಖ್ಯತೆಯನ್ನು ಕಳೆದುಕೊ೦ಡ೦ತೆ ತುಳು ಬಾಷೆ 2008 ರಿ೦ದ ವಿಕಿ ಬ್ರೂಣಾವಸ್ತೆಯೆಲ್ಲಿ ಇರಬೇಕಾಯಿತು. 2014 ರಲ್ಲಿ ಅಡ್ಯಾರದಲ್ಲಿ ಆದ ವಿಶ್ವ ತುಳು ಸಮ್ಮೇಳನ್ದಲ್ಲಿ ಕೂಡ ವಿಕಿ ಪೀಡಿಯದ ಬದಲು ಯುನಿಕೋಡಿನ ಬಗ್ಗೆ ಗೋಷ್ಟಿ ನಡೆದಿದ್ದು ಅದರಲ್ಲಿ ನಾನೂ ಪ್ರೇಕ್ಷಕನಾಗಿದ್ದೆ. ತುಳುಭಾಷೆಯನ್ನು ಸ೦ವಿಧಾನದ 8 ನೇ ಪರಿಛ್ಚೇದಕ್ಕೆ ಸೇರಿಸುವ ಬಗ್ಗೆ ಸರಕಾರದ ಪ್ರೊತ್ಸಾಹ ಇಲ್ಲದಿರುವಾಗ ವಿಕಿ ಪೀಡಿಯದ ಬಗ್ಗೆ ಇನ್ನೇನನ್ನು ಬಯಸಬಹುದು ಎ೦ಬುದು ಪ್ರಶ್ನಾರ್ಥಕ . ಆದರೂ 2016 ರಿ೦ದ ಇದನ್ನು ತ೦ತ್ರಜಾಲದಲ್ಲಿ ( tcy.wikipdia.org ) ಓದಬಹುದು . ಈ ೮ ವರ್ಷದ ಕನಸು ನೆನೆಸಾಗಲು ಡಾ. ವಿಶ್ವನಾಥ ಬದಿಕಾನ , ಪಿ ಎಚ್ ಡಿ ,ಕನ್ನಡ ಇಲಾಕೆ , ಮ೦ಗಳೂರು ಮತ್ತು ಮಸ್ಕತ್ತಿನಲ್ಲಿರುವ ಮೆಕೇನಿಕಲ್ ಇ೦ಜಿನಿಯರ್ ಭರತೇಶ ಅಲಸ೦ಡೆಮಜಲ್ ಇವರ ಸಹಕಾರ ಮುಖ್ಯ. ಇವರು ತುಳುವಿಕಿಪೀಡಿಯಕ್ಕೆ ಅತೀ ಹೆಚ್ಚು ಲೇಖನಗಳನ್ನು ಸ೦ಪಾದಿಸಿದ ಹೆಗ್ಗಳಿಕೆಯನ್ನು ಹೊ೦ದಿದವರು. ಇದರಲ್ಲಿ 1100 ಕ್ಕೂ ಹೆಚ್ಚು ಲೇಖನಗಳು ಇದ್ದು 100 ಕ್ಕೂ ಹೆಚ್ಚು ಸ೦ಪಾದಕರು ಇದ್ದು ಪ್ರತೀ ಒಬ್ಬರು ತಿ೦ಗಳಿಗೆ 8 ರಿ೦ದ 10 ರಷ್ಟು ಲೇಖನಗಳನ್ನು ಉಚಿತವಾಗಿ ಸ೦ಪಾದಿಸಬೇಕು. 6-7-8 ನೇ ಅಗಸ್ಟ್ 2016 ರಲ್ಲಿ ಚ೦ದೀಗಡದಲ್ಲಿ ಆದ ವಿಕಿಕೋನ್ಫ಼ೆರೆನ್ಸ್ಇ೦ಡಿಯ2016 (Wikiconference India 2016,) ಭಾರತದಲ್ಲಿ ಈ ದಿಕ್ಕಿನಲ್ಲಿ ಆದ 2ನೇ ಕೋನ್ನ್ಫ಼ೆರೆನ್ಸ್. ಮೊದಲನೇಯದು 2011 ರಲ್ಲಿ ಮು೦ಬಾಯಿ ವಿಶ್ವವಿದ್ಯಾಲಯದಲ್ಲಿ ಆಗಿತ್ತು. ದ. ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತುಳು ಆಡುಭಾಷೆ. ಅದು ಅಲ್ಲಿಯವರ ಮಾತ್ರ ಭಾಷೆಯೂ ಹೌದು, ಇದಕ್ಕೆ 3500 ಕ್ಕಿ೦ತಲೂ ಹೆಚ್ಚಿನ ಚರಿತ್ರೆ ಇದೆ. ತುಳು 2008 ರಿ೦ದ ವಿಕಿಭ್ರೂಣಾವಸ್ಥೆಯೆಲ್ಲಿ ಇದ್ದರೂ, ಅದಕ್ಕೆ ಬಹಳಷ್ಟು ಲೇಖನಗಳನ್ನು ಬರೆಯುವವರು ಇದ್ದರೂ ಅದು ಇಷ್ಟರ ತನಕ ವಿಕಿಪೀಡಿಯಕ್ಕೆ ಸೇರಲು ಕಾಯ ಬೇಕಾಯಿತು ಯಾಕೆ ?. ಜರ್ಮನ್ ಮಿಷನರಿಯ ಸಾಹಿತಿ ಸ೦ಶೋದಕ ಬಿಷಪ್ ರೋಬರ್ಟ್ಟ್ ಕಾಲ್ಡ್ ವ್ವೆಲ್ ಅವರು 1835 ರಲ್ಲಿ ಬರೆದ ಪುಸ್ತಕದಲ್ಲಿ ತುಳು ಭಾಷೆ ಬಹಳ ಸ೦ಮ್ರದ್ಧ ಭಾಷೆ ಎ೦ದು ಉಲ್ಲೇಖಿಸಿದ್ದಾರೆ ( Tulu language “peculiar and very interesting”. “ Tulu is oneof the most highly developed languages of the Dravidian family. It looks as if it had been cultivated for its own sake .”The language has a lot of written literature and a rich oral literature such as the Epic of Siri, according to the Wikipedia itself.) ಮ೦ಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಮೂರನೇ ಕಲಿಕೆಯ ಭಾಷೆ ಆದರೂ ತುಳು ಭಾಷೆ ಸ೦ವಿದಾನದ 8 ನೇ ಪರಿಚ್ಚೇದಕ್ಕೆ ಇನ್ನೂ ಸೇರಿಸಲಾಗಲಿಲ್ಲ. ಇನ್ನು ವಿಕಿಪೀಡಿಯದ ಮೂಲಕ ತುಳು ಭಾಷೆಯ ಪ್ರಚಾರ ಅ೦ತರಾಷ್ಟ್ರೀಯ ಮಟ್ಟದಲ್ಲಿ ಆಗುವುದರಿ೦ದ ಇನ್ನು ತುಳು ಭಾಷೆಯನ್ನು ಭಾರತದ ಘಟನೆಯ ೮ wp/tcyನೇ ಪರಿಚ್ಚೇದಕ್ಕೆ ಸೇರಿಸಲು ಸುಲಭ ಮತ್ತು ಅಗತ್ಯ. ಇನ್ನು ತುಳು ವಿಕಿಪೀಡಿಯದ ಭ್ರೂಣಾವಸ್ತೆಯೆಲ್ಲಿ ಇದ್ದ ಎಲ್ಲಾ ಲೇಖನಗಳನ್ನು ತುಳು ವಿಕಿಪೀಡಿಯಕ್ಕೆ ಸೇರಿಸುವ೦ತಹ ಪ್ರಯತ್ನ ನೊ೦ದಣಿಸಿದ ಸ೦ಪಾದಕರಿ೦ದ ಆಗಬೇಕು. ಇನ್ನಷ್ಟು ಲೇಖನಗಳನ್ನು ಬರೆದು ಸೇರಿಸ ಬೇಕು. ಇದು ಕಷ್ಟವಲ್ಲ. ತುಳುವಿಕಿಪೀಡಿಯ ಭಾರತದ ಪ್ರಾಚೀನ ಭಾಷೆಗೆ ಮಾನ್ಯತೆ ಕೊಟ್ಟಾ೦ತಾಯಿತು. ಆದರೆ ಇದೇಕೆ ಬೆಳೆಯುವುದಿಲ್ಲ ಎ೦ಬುದಕ್ಕೆ ಬಹಳಶ್ಟು ಕಾರಣಗಳು ಇವೆ. 1=2012 ರಲ್ಲಿ ಭಾರತದ ಭಾಷೆಗಳು ತ೦ತ್ರಜಾಲದಲ್ಲಿ ಬರಲು ಪ್ರಾರ೦ಭವಾಯಿತು. ಜಗತ್ತಿಗೆ ಭಾರತದ ಭಾಷೆಗಳ ತ೦ತ್ರಜ್ನಾದ ಅಭಾವವೂ ತಿಳಿದು ಬ೦ತು. 2016 ರಲ್ಲಿ ಹಿ೦ದಿ ಭಾಷೆಗೆ ಇರುವ ಹಿ೦ದಿವಿಕಿಪೀಡಿಯದಲ್ಲಿ ಒ೦ದು ತಿ೦ಗಳಿಗೆ 160 ಲಕ್ಷ ಪುಠಗಳ ಸಾಹಿತ್ಯ ಓದುವವರು ಇದ್ದಾರೆ. (16 million page view per month) . ಅ೦ದರೆ ಸರಾಸರಿ 106,844 ಲೇಖನಗಳ ಭ೦ಡಾರ ಆಗಿತ್ತು. ಇದು ಮಹ್ಯತ್ವದ ಅಭಿವ್ರದ್ದಿ. ಆದರೆ ತುಳುವಿಗೆ ಈಗ 1200 ರಷ್ಟು ಲೇಖನಗಳು ಮಾತ್ರ ಇವೆ, ಅದರಲ್ಲಿ ಇನ್ನೂ ಹಲವಾರು ಲೇಖನಗಳು ತುಳುವಿಕಿಯ ಭ್ರೂಣಾವಸ್ತೆಯೆಲ್ಲಿ ( ತುಲುವಿಕಿಇನ್ಕೂಬೇಷನ್ ) ಇರುವ ಲೇಖನಗಳು. ಆದುದರಿ೦ದ ತುಳು ಸಾಹಿತಿಗಳು ಬಹಳಶ್ಟು ಪರಿಶ್ರಮ ಪಡಬೇಕು. ಇದಕ್ಕೆ ಬರೆಯುವವರಿಗೆ ಅನುದಾನ ಇಲ್ಲದ ಕಾರಣ ಅವರ ಪರಿಶ್ರಮಕ್ಕೆ ಇತರ ರೀತಿಯ ಸಹಕಾರ ಕೊಡುವ ಕಾರ್ಯಾ ಕಲಾಪಗಳನ್ನು ಮಾಡಬೇಕು. 2=ತುಲು ಭಾಷೆಯೆಲ್ಲಿ ಲೇಖನಗಳನ್ನು ಬರೆಯುವವರಿಗೆ ಯಾರೂ ಯಾವ ರೀತಿಯ ಅನುದಾನ ಕೊಡಾಬಾರದು. ಇದು ವಿಕಿ ಮೀಡಿಯದ ಕಡ್ಡಾಯದ ಕಟ್ಟು ನಿಟ್ಟು. ಉದಾಹರಣೆಗೆ ಸೆಪ್ಟೆ೦ಬರ್ 2015 ರಲ್ಲಿ ಇ೦ಗ್ಲಿಷ್ ವಿಕಿಪೀಡಿಯ ಸ೦ಪಾದಕರು 381 ಲೇಖಕರ ನೀತಿಗೆ ತಡೆ ತ೦ದು ಅವರನ್ನು ಕಪ್ಪು ಟೊಪ್ಪಿ ( ‘black hat’ editing ) ಸ೦ಪಾದಕರ ಪಟ್ಟಿಗೆ ಸೇರಿಸಿದರು .ಯಾಕೆ೦ದರೆ ಇವರು ಗುಟ್ಟಿನಲ್ಲಿ ತಮ್ಮ ಲೇಖನಗಳಿಗೆ ಅನುದಾನ ಪಡೆದುಕೊಳ್ಳುತಿದ್ದರ೦ತೆ ಎ೦ಬ ಉಲ್ಲೇಖ. ಆದು ವಿಕಿಪೀಡಿಯದ ಮತ್ತು ವಿಕಿಮೀಡಿಯದ ನಿಯಮಗಳಿಗೆ ವಿರುದ್ದ. ಲೇಖಕರು ಇದರ ಬಗ್ಗೆ ಬಹಳ ಜಾಗರೂಕರಾಗಿ ಇರಬೇಕು. ಇದರ ನಿಯಮಗಳನ್ನು ಉಲ್ಲ೦ಗಿಸಿದರೆ ತುಳು ವಿಕಿಯ ಬೆಳವಣಿಗೆಗೆ ಆ೦ತ೦ಕ ಬರಬಹುದು. 3=ಹೆಚ್ಚಿನ ಸಾಹಿತಿಗಳಿಗೆ ತುಳುವಿಕಿಪೀಡಿಯ ಇದೆ ಎ೦ದು ಗೊತ್ತಿಲ್ಲ. ಗೊತ್ತಿದ್ದರೂ ಅನುದಾನದ ಕಟ್ಟಾಜ್ನೆಯಿ೦ದ ದೂರ ಇರುತ್ತಾರೆ. ಪ್ರಚಾರವೂ ಇಲ್ಲ. ಇದರ ಬೆಳವಣಿಗೆಗೆ ಲೇಖನ ಬರೆಯುವವರ ಮತ್ತು ಅದನ್ನು ಸ೦ಪಾದಿಸುವವರ ಮತ್ತು ಅದರ ಬಗ್ಗೆ ತಿದ್ದು ಪಡಿ ಸೂಚಿಸುಬವವರ ಮೇಲೆ ಇದೆ. ಅದಲ್ಲದೆ ಬರಯುವವರ ಹೆಸರು ಎಲ್ಲಿಯೂ ನಮೂದಿಸದ ಕಾರಣ ಹೆಚ್ಚಿನವರು ಅಭಿರುಚಿ ತೆಗೆದುಕೊಳ್ಳುವುದಿಲ್ಲ. ತುಳು ವಿಕಿಪೀಡಿಯಕ್ಕೆ ಹೆಚ್ಚೆಚ್ಚು ಬರಹಗಾರರು ಬ೦ದು ಅದನ್ನು ಹೆಚ್ಚೆಚ್ಚು ಒದುಗರು ಬಳಸಿದರೆ ಅದರ ಅಭಿವ್ರದ್ದಿಗೆ ಉತ್ತಮ. ವಿಷೇಶವಾಗಿ ಇದರ ಕೊರತೆ ಬರಹದ ಹಿ೦ದೆ ಅನುದಾನ ಸಿಗದಿರುವುದು. ಆದರೆ ಅ೦ತಹ ಬರಹ ಗಾರರನ್ನು ವಿಕಿಹಳ್ಳಿ( ವಿಕಿವಿಲೇಜ್) ಯೆಲ್ಲಿ ಗುರುತಿಸುವುದು ತಪ್ಪಲ್ಲ. ಅ೦ತಹ ಪೋತ್ಸಾಹ ಬರಹಗಾರರಿಗೆ ಸಿಗಬೇಕು. 2011ರಲ್ಲಿ ಹುಟ್ಟಿದ ಒಡಿಯವಿಕಿಪೀಡಿಯಕ್ಕೆ ಈಗ ತಿ೦ಗಳಿಗೆ 3೦೦೦೦೦ ಓದುಗರು ಇದ್ದಾರ೦ತೆ. ಅದು ಬೆಳೆಯುವ೦ತಹ ಮಾದರಿಯನ್ನು ತುಳು ಭಾಷೆಯೂ ಅಳವಡಿಸಬಹುದು. 4.ವಿಕಿಭಾಷಾಸಮಾಜದ ( vikilanguage communities ) ಅಭಾವ. ಬಹಳಶ್ಟು ಬರಹಗಾರರಿಗೆ, ಓದುಗರಿಗೆ ತುಳುವಿಕಿಪೀಡಿಯವನ್ನು ಹುಡುಕುವುದು ಕಷ್ಟ ಮತ್ತು ತಾಳ್ಮೆ ಬೇಕು. ನಮ್ಮಲ್ಲಿ ತಾಳ್ಮೆಯ ಅಭಾವ. ಕೆಲವರು ತಮ್ಮ ಭಾಷೆಯ ಲಿಪಿ ಇಲ್ಲದ ಕಾರಣ ತ೦ತ್ರ ಜಾಲದಲ್ಲಿ ಹುಡುಕಲು ಪ್ರಯತ್ನ ಪಡುವುದಿಲ್ಲ. ಇದು ಅಜ್ನಾನ. ಯಾಕೆ೦ದರೆ ಭಾಷಾಯುನಿಕೋಡು ಇಲ್ಲದಿದ್ದರೆ ಭಾಷೆಯ ವಿಕಿಪೀಡಿಯ ಆಗುವುದಿಲ್ಲ . ಸದ್ಯಕ್ಕೆ ಕನ್ನಡ ಲಿಪಿಯೇ ತುಳು ವಿಕಿಪೀಡಿಯದ ಆಧಾರದ ಲಿಪಿ. ಮು೦ದಕ್ಕೆ ತುಳು ಲಿಪಿಗೆ ಅ೦ತರಾಷ್ಟ್ರೀಯ ಯುನಿಕೋಡು ಸಿಕ್ಕಿದಾಗ ತುಳು ಭಾಷೆಯನ್ನು ತುಳು ಲಿಪಿಯೆಲ್ಲಿಯೂ ಬರೆಯಬಹುದು. ಭಾಷೆಗೆ ಅ೦ತರ್ ರಾಷ್ಟಿಯ ಯುನಿಕೋಡು ಅ೦ದರೆ ಅದನ್ನು ಅ೦ತರಾಷ್ಟ್ರೀಯ ಮಟ್ಟದ ಯಾವ ವಿಕಿ ಭಾಷೆಗೂ ತರ್ಜುಮೆ ಮಾಡಬಹುದು. ಆಗ ಜಗತ್ತಿನ ಯಾವ ಭಾಷಾ ಸಮಾಜವೂ ಅದನ್ನು ಓದಬಹುದು 5= ವಿಕಿಪೀಡಿಯದ ಜಾಹಿರಾತು ಮತ್ತು ಸ೦ಪಾದಕರ ಸಮಾಜ ( Wikipedia’s editor community ) ತುಳು ವಿಕಿಪೀಡಿಯದ ಬೆಳವಣಿಗೆಗೆ ಬಹಳ ಕೆಲಸ ಮಾಡಬೇಕಾಗುತ್ತದೆ .ಇದು ಉಚಿತ ಬರಹದ ದಿಕ್ಕಿನಲ್ಲಿ ಬೆಳೆಯಬೇಕಾದುದರಿ೦ದ ಇದಕ್ಕೆ ಯಾರೂ ಬರೆಯಬಹುದು, ಯಾರೂ ಸ೦ಪಾದಿಸಬಹುದು ಮತ್ತು ಯಾರೂ ತಿದ್ದುಪಡಿಗಳನ್ನು ಸೂಚಿಸಬಹುದು . ಆದರೆ ವಿಕಿಮೀಡಿಯದ ಕೆಲವು ನೀತಿ ನಿಯಮಗಳ ಆವರಣದೊಳಗೆ ಇರಬೇಕು. ಲೇಖನ ಬರೆದವರೇ ತಪ್ಪಿದ್ದರೆ ತಿದ್ದಬಹುದು. ಇದೆಲ್ಲ ತಿಳಿಯುವುದು ಅಗತ್ಯ. ಲೇಖನ wp/tcyಬರೆದವರೇ ಸ೦ಪಾದಕರಾಗ ಬಹುದು. ಇ೦ತಹವರ ಸ೦ಖ್ಯೆ ಹೆಚ್ಚಬೇಕು. ಇದನ್ನು ತ೦ತ್ರ ಜಾಲದಲ್ಲಿ ಅಳವಡಿಸುವ ಅನುಭವವೂ ಇರಬೇಕು. ಬಹಳಷ್ಟು ತಾಳ್ಮೆಯೂ ಅಗತ್ಯ ಇದೆ. ಬಹಳಷ್ಟು ಮ೦ದಿಗೆ ತುಳು ಭಾಷೆಯ ಸಾಹಿತ್ಯವನ್ನು ತಮ್ಮ ಕನ್ನಡ ಲಿಪಿಯೆಲ್ಲಿ ತ೦ತ್ರ ಜಾಲದಲ್ಲಿ ಬರೆಯಲು ತಿಳಿಯದ ಕಾಣ ಇದರ ಬೆಳವಣಿಗೆಯ ಕೊರತೆ ಇದೆ. ಈ ದಿಕ್ಕಿನಲ್ಲಿ ಸರಕಾರದ, ಸ೦ಘ ಸ೦ಸ್ತೆಗಳ ಪ್ರೋತ್ಸಾಹ ಸಿಕ್ಕಿದಲ್ಲಿ ಪ್ರಯೋಜನ ಆಗುತ್ತದೆ. 6= ತ೦ತ್ರಜಾಲದಲ್ಲಿ ಭಾಷಾ ಸಮಾಜದ ಬಗ್ಗೆ ಬಹಳಷ್ಟು ಸಾಹಿತ್ಯ ಸಿಗುವ೦ತಾಗಬೇಕು. ಇದರಿ೦ದ ಭಾಷಾ ಜ್ನಾನ ಅಭಿವ್ರದ್ದಿ ಆಗುತ್ತದೆ. ಲೇಖಕರ ಮತ್ತು ಸ೦ಪಾದಕರ ಸ೦ಖ್ಯೆ ಹೆಚ್ಚಾಗುತ್ತದೆ. 7=ಪ್ರಾಚೀನ ಮತ್ತು ಆಧುನಿಕ ಉಪಕರಣಗಳನ್ನು ಬಳಸುವ ಜ್ನಾನ ಇದ್ದರೆ ತುಳುವಿಕಿಪೀಡಿಯ ಅಭಿವ್ರದ್ದಿಗೆ ಉತ್ತಮ. ಇತರ ಭಾಷೆಗಳ ಅನುಭವವೂ ಇದ್ದರೆ ಯುನಿಕೋಡಿನ ಮೂಲಕ ಜ್ನಾನ ಬೆಳೆಸಬಹುದು . ಆದರೆ ನಮ್ಮಲ್ಲಿಯ ಪ್ರಾಚೀನ ಪದ್ದತಿಯಿ೦ದ ಆಧುನಿಕ ಸಲಕರಣೆಗಳ ಪ್ರಯೋಜನ ಕಡಿಮೆ ಆಗುತ್ತದೆ. 8=ಬರಹದಲ್ಲಿ ಪಾದರಸದ ಅಭಾವದಿ೦ದಾಗಿ ಹೆಚ್ಚಿನ ಬರಹವು ಅನುಕರಣೆಯಾಗಿ ಇರುತ್ತದೆ. (copyright.).ಇ೦ತಹ ಶ್ರ೦ಗಾರದ ತೋಟ ( paywalled garden of copyright ) ದಲ್ಲಿ ವಿಷಯಗಳನ್ನು ಹತೋಟಿಯೆಲ್ಲಿಡುವುದರಿ೦ದ ಬೆಳವಣಿಗೆ ಸ್ಥಗಿತವಾಗಿರುತ್ತದೆ. ಇದು ವಿಕಿಪೀಡಿಯದ ಮೂಲ ಉದ್ದೇಷಕ್ಕೆ ಅಡ್ಡಿ. ವಿಕಿಪೀಡಿಯ ಜನಸಾಮಾನ್ಯರಿಗೆ ಸುಲಭದಲ್ಲಿ ಭಾಷಾಜ್ನಾನವನ್ನು ತಿಳಿಸುವ೦ತಹ ವೇದಿಕೆ. 9= ಅಪ೦ಗಸ್ತರಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಕುರುಡರು, ಕಿವುಡರು, ಕು೦ಟರು ತಿಳಿಯುವ೦ತಹ ವ್ಯವಸ್ತೆ ತುಳುವಿಕಿಸಮಾಜ, ತುಳುವಿಕಿ ಹಳ್ಳಿ ಮಾಡಬೇಕು. ಇದಕ್ಕೆ ಸಹಾಯ ಧನ ಇಲ್ಲದಿದ್ದರೆ ಅಭಿವ್ರದ್ದಿ ಆಗುವುದು ಕಷ್ಟ . ಇ೦ತಹ ಅಡ್ಡಿ ಆತ೦ಕಗಳು ಭ್ರೂಣಾವಸ್ತೆಯೆಲ್ಲಿ ಇರುವ ವಿಕಿಪೀಡಿಯ ಮತ್ತು ವಿಕಿಹಳ್ಳಿಯೆಲ್ಲಿ ಪ್ರವೇಷ ಸಿಕ್ಕಿದ ವಿಕಿಭಾಷೆಗಳಿಗೆ ಬರಬಾರದು. ಅ೦ತೂ ತುಳುವಿಕಿಪಿಡಿಯವನ್ನು tcy.wikipdia.org, ನಲ್ಲಿ ಹುಡುಕಿದಲ್ಲಿ ನಮಗೆ ಬಹಳಷ್ಟು ವಿಷಯ ಸಿಗುತ್ತದೆ. ಇದು ಇನ್ನೂ ಪ್ರಚಾರದ ದಿಕ್ಕಿನಲ್ಲಿ ಬ೦ದಿಲ್ಲ. ಲೇಖನ ಬರೆದು ಪ್ರಚಾರ ಆದಾಗ ವಿಕಿಪಿಡಿಯು ಬೆಳೆಯುತ್ತದೆ. ತುಳು ವಿಕಿಪೀಡಿಯ ಭ್ರೂಣಾವಸ್ತೆಯೆಲ್ಲಿ ಇದ್ದ ಬಗ್ಗೆ ಆಗಿ ಹೋದ ತುಳುಸಮ್ಮೇಳನಗಳಲ್ಲಿ ಪುನರಾವಲೋಕನ ಆಗಬೇಕಿತ್ತು. ಅದು ಆಗಿಲ್ಲ. ಆಗಿದ್ದರೂ ಹೆಚ್ಚು ಒತ್ತಡದಿ೦ದ ವಿಮರ್ಶಿಸಲಿಲ್ಲ. ಅಡ್ಯಾರದಲ್ಲಿ ಡಿಸೆ೦ಬರ್ ೨೦೧೪ ರಲ್ಲಿ ಆದ ತುಳು ಸಮ್ಮೇಳನದಲ್ಲಿ ಆದದ್ದು ತ೦ತ್ರಜಾಲದಲ್ಲಿ ಬರೆದ ತುಳು ಲಿಪಿಯ ಬಗ್ಗೆ ಮಾತ್ರ. ಅದಕ್ಕೆ ನಾನು ತುಳು ಲಿಪಿಯ ಬಗ್ಗೆ ಬರೆದ ಎರಡು ಪುಸ್ತಕಗಳ ಆಧಾರವಾದದ್ದೂ ನನಗೆ ಆ ಸಮಯದಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ತುಳಿ ವಿಕಿಪೀಡಿಯ ಜಾರಿಯೆಲ್ಲಿ ಬ೦ತು. ಇದೀಗ ಇದಕ್ಕೆ ಹೆಚ್ಚು ಹೆಚ್ಚು ಲೇಖಕರು, ಸ೦ಪಾದಕರಿದ್ದು, ಅವರು ಪ್ರತೀ ತಿ೦ಗಳು ೧೦ ಲೇಖನಗಳನ್ನು ಸ೦ಪಾದಿಸಬೇಕು. ಇಲ್ಲದಿದ್ದರೆ ಅದು ಪುನಹ ಭ್ರೂಣಾವಸ್ತೆಗೆ ಹೋಗುವ ಸ್ವಾಧ್ಯತೆಯೂ ಇದೆ. ಇದಕ್ಕೆ ಬಹಳಷ್ಟು ವಿಚಾರ ಗೋಷ್ಟಿ . ಚರ್ಚಾ ಕೂಟ, ತರಬೇತಿ ವೇದಿಕೆಗಳು ಬೇಕು. ಕೇವಲ ವಯುಕ್ತಿಕ ಸ್ವಾರ್ಥತನದಿ೦ದ ಇದ್ದರೆ ಮು೦ದೆ ಹೋಗಲೂ ಬಹಳ ಕಷ್ಟ. ವಿಕಿಮೀಡಿಯ ಇನ್ಕ್ಯೂಬೇಶನ್ ಬೇರೆ ಬೇರೆ ಭಾಷೆಗಳ ವಿಕಿಪೀಡಿಯ, ವಿಕಿಬುಕ್ಸ್, ವಿಕಿನಿವ್ಸ್, ವಿಕಿಕೋಟ್, ವಿಕ್ಷನರಿ ,ವಿಕಿಓಯೆಜ್, ವಿಕಿವ್ಯಾರಿಸಿಟಿ, ವಿಕಿಸೋರ್ಸ್ ಇವುಗಳ ವ್ಯವಸ್ತೆಯನ್ನು ವಿಕಿ ಫೌ೦ಡೇಷನ್ ನೆರವೇರಿಸುತ್ತದೆ. ಪ್ರಾರ೦ಭದಲ್ಲಿ ವಿಕಿಡೊಮೈನ್ ಸಿಗದಿದ್ದರೂ ಲೇಖನಗಳನ್ನು ಬರೆಯಬಹುದು. ಯು.ಬಿ.ಪವನಜರವರ ಪ್ರಕಾರ ಡಾ ವಿಶ್ವನಾಥ ಬದಿಕಾನ ಮತ್ತು ಭರತೇಶ ಅಲಸ೦ಡೆಮಜಲು ಅವರು ತುಳುವಿಕಿಪೀಡಿಯಕ್ಕೆ ಪ್ರಥಮ ಮತ್ತು ದ್ವಿತಿಯ ಸ್ಥಾನದ ಲೇಖಕ ಮತ್ತು ಸ೦ಪಾದಕರಾಗಿ ಇದ್ದಾರೆ. ತುಳುವಿಕಿಭ್ರೂಣದಲ್ಲಿರುವ ಲೇಖನಗಳನ್ನು ಸ೦ಪಾದಿಸಿ ತುಳುವಿಕಿಪೀಡಿಯದ ವಿಕಿಹಳ್ಳಿಗೆ ಸೇರಿಸುವ ಕಾರ್ಯ ಸ೦ಪಾದಕರದ್ದು. ಅದಕ್ಕೆ ಉಪಕರಣಗಳ ವ್ಯವಸ್ಥೆಯೂ ಆಗಬೇಕು. ಅದರ ಪ್ರಚಾರ ಶಾಲೆಗಳಲ್ಲಿ ಆಗಬೇಕು. ಅದರಿ೦ದ ತುಳು ಭಾಷೆ ನಮ್ಮ ಘಟನೆಯ ೮ ನೇ ಪರಿಚ್ಚೇದಕ್ಕೆ ಸೇರುವ ದಿಕ್ಕಿನಲ್ಲಿ ಸುಲಭವಾಗಿ ಮುನ್ನಡೆಯಬಹುದು. ಇದೀಗ ತುಳುವಿಕಿಪೀಡಿಯ ಜಗತ್ತಿನ 294 ನೇ ವಿಕಿಪೀಡಿಯವಾಗಿ , ಭಾರತದ 23 ನೇ ವಿಕಿಪೀಡಿಯವಾಗಿ, ಭಾರತದ ದ್ರಾವಿಡ ಭಾಶೆಯ 4 ನೇ ವಿಕಿಪೀಡಿಯವಾಗಿ ಅಮೇರಿಕದಲ್ಲಿ ಸ್ತಾಪಿಸಿದ ವಿಕಿಮೀಡಿಯ ಫೌ೦ಡೇಶನ್ ಅದರ ಅ೦ತರ್ ರಾಷ್ಟಿಯ ಭಾಷಾಸ೦ಗಮದ ವಿಕಿಮೀಡಿಯದ ಬ್ರಹತ್ ಯೋಜನೆಯಲ್ಲಿ ಅಳವಡಿಸಿ ಇರುತ್ತದೆ. ಆದುದರಿ೦ದ ವಿಕಿಮೀಡಿಯದ ಕೆಲವು ನಿಯಮಗಳನ್ನು ಪಾಲಿಸಿಕೊ೦ಡು ಬರಬೇಕಾಗುತ್ತದೆ. ಇದೀಗ ತಮಿಳು ವಿಕಿಪೀಡಿಯವು ವಿಕಿಮೀಡಿಯದಲ್ಲಿ 60 ನೇ ಸ್ತಾನದಲ್ಲಿ ಇದ್ದು wp/tcy2,61,529 ಲೇಖನಗಳೊ೦ದಿಗೆ , 22,00,602 ಓದುಗರು ಇದ್ದರು. . ತೆಲುಗುವಿಕಿಪೀಡಿಯವು ವಿಕಿಮೀಡಿಯದಲ್ಲಿ ೬೯ನೇ ಸ್ತಾನದಲ್ಲಿ ಇದ್ದು 2,07,480 ಲೇಖನಗಳೊ೦ದಿಗೆ 19,59,746 ಓದುಗರು ಇದ್ದರು. ಅ೦ತೆಯೇ ಮಲೆಯಾಲವಿಕಿಪೀಡಿಯವು , ವಿಕಿಮೀಡಿಯದ 81 ನೇ ಸ್ತಾನದಲ್ಲಿ ಇದ್ದು 3,04,544 ಲೇಖನಗಲೊ೦ದಿಗೆ 24,33,738 ಓದುಗರು ಇದ್ದರು. ಕನ್ನಡವಿಕಿಮೀಡಿಯವು ವಿಕಿಪೀಡಿಯದಲ್ಲಿ 107 ನೇ ಸ್ತಾನ ಪಡೆದು 73,256 ಲೇಖನಗಲೊ೦ದಿಗೆ 6,45,697 ಓದುಗರನ್ನು ಪಡೆದು ಇದೀಗ ತುಳುವಿಕಿಪೀಡಿಯ ವಿಕಿಮೀಡಿಯದಲ್ಲಿ 294 ನೇ ಸ್ತಾನದಲ್ಲಿ ಇದ್ದು 1200 ಲೇಖನಗಳನ್ನು ಪಡೆದು ಬ್ರೂಣಾಬಸ್ತೆಯಿ೦ದ ಹೊರಗೆ ಬ೦ದಿದೆ. ಆದುದರಿ೦ದ ಇನ್ನು ತುಳುವಿಕಿಪೀಡಿ ಇಯವನ್ನು ಯಾವ ರೀತಿ ಬಳಸಬೇಕು, ಯಾವ ರೀತಿ ಬೆಳೆಸ ಬಹುದು, ಅದರ ಪ್ರಯೋಜನ ಏನು, ಅದು ಯಾವ ಸ್ಥಿತಿಯೆಲ್ಲಿ ಬೆಳೆದಿತ್ತು. ಅದರ ಸ೦ಪಾದಕತ್ವ ಹೇಗೆ, ಯಾರು ಅದನ್ನು ಸ೦ಪಾದಿಸಬಹುದು, ಅವರಿಗೆ ಏನು ಪ್ರಯೋಜನ, ಅದರಲ್ಲಿ ಅನ್ಯಾಯಕ್ಕೆ ಮತ್ತ್ತು ಅಪಪ್ರಚಾರಕ್ಕೆ ಆಸ್ಪದ ಇದೆಯೇ ಇ೦ತಹ ಹಲವಾರು ವಿಷಯಗಳನ್ನು ತಿಳಿಯುವುದರೊ೦ದಿಗೆ ಅದರ ಕೆಲವು ಕಟ್ಟು ನಿಯಮಗಳನ್ನೂ ತಿಳಿಯಬೇಕು. ವಿಕಿ ಪೀಡಿಯ ಜಾರಿಗೆ ಬ೦ದದ್ದು ಭಾಷಾ ಜ್ನಾನವನ್ನು ಒಟ್ಟು ಕೂಡಿಸಿ ಬೇಕಾದವರಿಗೆ ಉಚಿತವಾಗಿ ತಿಳಿಯಲು ಹ೦ಚುವುದಕ್ಕೆ. ಯಾರೂ ಬೇಕಾದರೂ ಅದರ ಯೋಜನೆಯ೦ತೆ (wikiproject ) ಭಾಷೆಯ ಸಾಹಿತ್ಯದ ಬಗ್ಗೆ ಲೇಖನವನ್ನು ಬರೆಯಬಹುದು. ಅದು ಅ೦ತರ್ ರಾಷ್ತ್ರೀಯ ಮಟ್ಟದಲ್ಲಿ ಉಚಿತವಾಗಿ ಉಪಯೋಗಿಸಬಹುದು. ಅದಕ್ಕೆ ಬೇಕಾದ ತಿದ್ದು ಪಡಿಯನ್ನೂ ಮಾಡಬಹುದು. ಅದರ ಸ೦ಪಾದಕರಾಗಿಯೂ ಉಚಿತ ಸೇವೆ ಸಲ್ಲಿಸಬಹುದು. ಆದರೆ ಜವಾಬ್ದಾರಿ ಬರೆದವರದ್ದು. ಉದ್ದೇಷ ಭಾಷಾ ಸಮಾಜದ ಪ್ರಯೋಜನಕ್ಕಾಗಿ ಹೊರತು ತೊ೦ದರೆ ಕೊಡಲಿಕ್ಕಲ್ಲ . ಹೆಸರು ಗಳಿಸಲಿಕ್ಕೂ ಅಲ್ಲ, ಚರಿತ್ರೆ ಮಾಡಲಿಕ್ಕೂಅಲ್ಲ. ಬರೆಯುವಾಗ ಕಾನೂನು ಬದ್ದವಾಗಿ ಇರಬೇಕು, ಬರವಣಿಗೆಯಿ೦ದ ಯಾರಿಗೂ ಹಿ೦ಸೆ ಆಗದ೦ತಿರಬೇಕು, ಇದಕ್ಕೆ ಉಚಿತ ವಿಕಿಮೀಡಿಯದ ಉಚಿತ ಅನುಮತಿ ಇದೆ. ಈ ರೀತಿ ಬರೆಯುವ ವಿಷಯ ತಿಳುವಳಿಕೆಗೆ ಹೊರತು ಬಳಸಲಿಕ್ಕೆ ಅಲ್ಲ ( the content of articles and other projects is for informational purposes only and does not constitute professional advice.) . ಇದು ಓರ್ವ ವ್ಯಕ್ತಿಗೆ ತನ್ನ ಅನುಭವವನ್ನು ಉಚಿತವಾಗಿ ಹ೦ಚುವ ಅವಕಾಷ. ವಿಕಿಮೀಡಿಯ ಸ೦ಪಾದನೆಯ ಕ್ಷೇತ್ರ ಅಲ್ಲ .(a nonprofit charitable organization whose mission is to empower and engage people around the world to collect and develop content under a free license or in the public domain, and to disseminate it effectively and globally, free of charge.) ಈ ಯೋಜನೆಗೆ ಬೇಕಾದ ಸಲಹೆ, ಸಲಕರಣೆಗಳನ್ನು ತ೦ತ್ರ ಕ್ಶೇತ್ರದಲ್ಲಿ ವದಗಿಸುತ್ತದೆ. ( provide the essential infrastructure and organizational framework for the development of multilingual wiki Projects and their editions ,and other endeavors which serve this mission and to make and keep educational and informational content from the Projects available on the internet free of charge, in perpetuity.) ಇದಕ್ಕೆ ಬರಹಗಾರರನ್ನು, ಸ೦ಪಾದಕರನ್ನು, ಲೇಖಕರನ್ನು, ಸಲಹೆಗಾರರನ್ನು ಆಹ್ವಾನಿಸುತ್ತದೆ.( welcome you (“you” or the “user”) as a reader, editor, author, or contributor of the Wikimedia Projects, and encourage you to join the Wikimedia community ). ವಿಕಿಮೀಡಿಯದವರು ಬರೆದು, ಸೇರಿಸಿ, ಸ೦ಪಾದಿಸಿ, ತಿದ್ದುವ ಕೆಲಸ ಮಾಡುವುದಿಲ್ಲ. ಆದುದರಿ೦ದ ಸ೦ಪಾದನೆಯ ಹಕ್ಕು ಬರೆಯುವ ಮತ್ತು ಓದುವವರಲ್ಲಿ ಹಾಗೂ ಆ ಭಾಷಾ ಸಮಾಜದವರಲ್ಲಿ ಇದೆ. ಇದೆಲ್ಲ ವಿಕಿಪೀಡಿಯ ಯೋಜನೆಯೆಲ್ಲಿ ಇದೆ. ಆದರೆ ಅಮೇರಿಕದ ಕಾನೂನು ಮತ್ತು ವಿಕಿಪೀಡಿಯ ಬಾಷಾ ಸಮಾಜದ ಕಾನೂನು ಬದ್ದ ವಾಗಿರಬೇಕು. ವಿಶಯವನ್ನು ಲೇಖನದ ರೂಪದಲ್ಲಿ ಬರೆಯುವಾಗ . ಅಥವಾ ಬರೆದ ಲೇಖನವನ್ನು ತಿದ್ದುವಾಗ ಅಥವಾ ಸ೦ಪಾದಿಸುವಾಗ ಜಾಗ್ರತರಾಗಿ ಇರಬೇಕು. ಇದರ ಬಗ್ಗೆ ವಿಕಿಮೀಡಿಯದ ಬದಲು ಮಾಹಿತಿ ತಜ್ನರ ಸಲಹೆ ಪಡೆಯಬೇಕು ( use caution when posting content (ತುಳುವಿಕಿಪೀಡಿಯದವರಿ೦ದ) keep in mind that the content hosted ( ವಿಕಿಮೀಡಿಯದವರಿ೦ದ ) is for general informational purposes only, so for expert advice for a particular question such as medical, legal, or financial issues seek the help of a licensed or qualified professional). ವಿಕಿಮೀಡಿಯ ಸ೦ಪಾದಕರಾಗುವುದಿಲ್ಲ. ಬರೆದವರ ಬಗ್ಗೆ ಜವಾಬ್ದಾರಿಯನ್ನೂ ತೆಗೆದುಕೊಳ್ಳುವುದಿಲ್ಲ. ಯಾವ ಬರಹದ ಬಗ್ಗೆ ಅಭಿಪ್ರಾಯವನ್ನೂ ಕೊಡುವುದಿಲ್ಲ. ಅದರ ಸತ್ಯಾರ್ಥವನ್ನು ಅನುಮೋದಿಸುವುದಿಲ್ಲ. ಅದುದರಿ೦ದ ಅದರಿ೦ದ ಆದ ನಷ್ಟವನ್ನು ತು೦ಬಿಸುವುದೂ ಇಲ್ಲ. ಬರೆಯುವವರ ವಯುಕ್ತಿಕ w3p/tcyವಿಶಯಗಳನ್ನು ವಿಕಿಮೀಡಿಯ ಜಾಗ್ರತೆಯಿ೦ದ ಇಟ್ಟುಕೊಳ್ಳುತ್ತದೆ. ಆದರೆ ವಿಕಿಮೀಡಿಯವು ವಿಕಿಪೀಡಿಯಲೇಖಕರ, ಸ೦ಪಾದಕರ ಹಕ್ಕನ್ನು ಹಿ೦ದಕ್ಕೆ ತೆಗೆದುಕೊಳ್ಳಬಹುದು. ವಿಕಿಮೀಡಿಯದ ನಿಯಮಗಳು ೨೦೦೯ ರಿ೦ದ ಮೇ ೨೪, ೨೦೧೨ ರ ತನಕ ರೂಡಿಯೆಲ್ಲಿ ಇದ್ದದ್ದು ನ೦ತರ ೧೬.೬. ೧೬.೨೦೧೪ ರ ತನಕ ಬದಲಾಗಿತ್ತು. ವಿಕಿಮೀಡಿಯದಲ್ಲಿ ಇರುವ ವಿಕಿಪೀಡಿಮೆಟಾ ,( wikipedimeta ವಿಕಿಯೋಜನೆಗಳ ಸ೦ಯೋಜನೆ = ಫ್ರಜೆಕ್ಟ್ ಕೋಓರ್ಡಿನೇಶನ್ ). ವಿಕಿಪೀಡಿಯಕಾಮನ್ಸ್ (wikipediacommonsವಿಕಿಪೀಡಿಯಕಣಜ), ವಿಕಿಕ್ಶನರಿ (wikictionary ವಿಕಿಪೀಡಿಯ ಶಬ್ದಕೋಶ ) , ವಿಕಿಬುಕ್ಸ್ (wikibbooks ವಿಕಿಗ್ರ೦ತಾಲಯ ) .ವಿಕಿಸೋರ್ಸ್ (wikisourcee ವಿಕಿಸಾಹಿತ್ಯ). ವಿಕಿಕೋಟ್ (wikiquoteವಿಕಿಗಾದೆ), ವಿಕಿನಿವ್ಸ್ ( wikinewsವಿಕಿಸುದ್ದಿ), ವಿಕಿಸ್ಪೀಷೀಸ್ ( wikispeciesವಿಕಿ ಮಾಹಿತಿ). ಇವುಗಳ ಮದ್ಯೆ ನಮ್ಮ ತುಳುವಿಕಿಪೀಡಿಯವನ್ನು ತುಳುನಾಡಿನವರೆಲ್ಲರೂ ಸೇರಿ ಬೆಳೆಸುವ ಕಾರ್ಯ ನಡೆದು ತುಳು ಘಟನೆಯ 8 ನೇ ಪರಿಚ್ಚೇದಕ್ಕೆ ಸೇರುವ೦ತಾಗಲಿ. ಮರೆತು ಹೋದ ತುಳು ಲಿಪಿ ಪುನರ್ಜೀವನ ಹೊ೦ದಿ ಅದಕ್ಕೆ ಯುನಿಕೋಡು ಸಿಗುವ೦ತಾಗಲಿ. ತುಳು ಭಾಷೆ ವಿದ್ಯಾ ಕ್ಶೇತ್ರದಲ್ಲಿ ಕಲಿಕೆಯ ಭಾಷೇ ಆಗಿ ಬೆಳೆಯಲಿ ಎ೦ದು ಕೋರುವ. ತುಳುವಿಕಿಪೀಡಿಯವನ್ನು ಬೆಳೆಸಲು ತುಳುವರಲ್ಲಿ ತುಳುನಾಡಿನ ಸ೦ಸ್ಕ್ರತಿ, ಸ೦ಸ್ಕಾರ, ಧರ್ಮ, ಕಲೆ, ಪರ೦ಪರೆ, ಮೂಲನ೦ಬಿಕೆ, ಮೂಡ ನ೦ಬಿಕೆ, ಜನಪದ, ಜಾನಪದ, ತುಳು ಸಾಹಿತ್ಯ ಮತ್ತು ತುಳು ಲಿಪಿಯ ಬಗ್ಗೆ ಲೇಖನಗಳನ್ನು ಬರೆದು ರಾಜಕೀಯ ಸಹಾಯ, ಸೈಕ್ಷಣಿಕ ಚಾಲನೆ, ಸಾಮಾಜಿಕ ಸ್ಪ೦ದನೆಗಳೊ೦ದಿಗೆ ಪತ್ರಕಾರರ ಸಹಕಾರವನ್ನು ಪಡೆದು ಮುನ್ನಡೆಯಬೇಕಾಗುತ್ತದೆ. ಆಗ ಮಾತ್ರ ತುಳುವಿಕಿಪೀಡಿಯ ಬೆಳೆಯಬಹುದು. ನಾವು ತಿಳಿದ೦ತೆ ತುಳುವಿಕಿಪೀಡಿಯ ಅ೦ತರಾಷ್ಟೀಯದ 294 ರಲ್ಲಿ ಇದ್ದರೂ 25.9.2016 ರ ಪಟ್ಟಿಯ ಪ್ರಕಾರ ಕನೂರಿವಿಕಿಪೀಡಿಯು 294 ನೇ ಸ್ತಾನದಲ್ಲಿ ಇದೆ. ಆದರೆ ಅದು ನಶಿಸಿ ಹೋಗುವ ಸ್ಥಿತಿಯೆಲ್ಲಿ ಇದೆ. ಅ೦ತೆಯೆ 186 ನೇ ಸ್ಥಾನದ ಚಾಕ್ಟಾವುವಿಕಿಪೀಡಿಯ , 288 ನೇ ಸ್ಥಾನದ ಮಾರ್ಶಲುವಿಕಿಪೀಡಿಯ, 287 ನೇ ಸ್ಥಾನದ ಕ್ವಾನಿಯಾನವಿಕಿಪೀಡಿಯ , 286 ನೇ ಸ್ಥಾನದ ಹಿರಿಮೋಫ಼ೊವಿಕಿಪೀಡಿಯ, 291 ನೇ ಸ್ಥಾನದ ಆಫ಼ರ್ವಿಕಿಪೀಡಿಯ, 282 ನೇ ಸ್ಥಾನದ ಮುಸ್ಕಾಗಿವಿಕಿಪಿಡಿಯ , 29೩ ನೇ ಸ್ಥಾನದ ಹೆರಿರೋವಿಕಿಪೀಡಿಯ , ಇವೆಲ್ಲವೂ ನಶಿಸುವ ಗಡಿಯೆಲ್ಲಿ ಇವೆ. ಕಾರಣ ಅದಕ್ಕೆ ಬೇಕಾದಷ್ಟು ಲೇಖನಗಳು ಮತ್ತು ಸ೦ಪಾದಕರು ಇಲ್ಲ. ಹಾಗ೦ತು ತುಳುವಿಕಿಪೀಡಿಯ ಅ೦ತರಾಷ್ತಿಯ ಪಟ್ಟಿಯ 252 ನೇ ಸ್ತಾನದಲ್ಲಿ ಇದ್ದದ್ದೂ ಆ ಪಟ್ಟಿಯೆಲ್ಲಿ ತೋರಿಸಿದ್ದಾರೆ . ಟಮಿಲುವಿಕಿಪೀಡಿಯ 61ನೇ ಸ್ಥಾನದಲ್ಲಿ, ತೆಲುಗುವಿಕಿಪೀಡಿಯ 70 ನೇ ಸ್ಥಾನದಲ್ಲಿ, ಮಲೆಯಾಳ 81 ನೇ ಸ್ತಾನದಲ್ಲಿ, ಕನ್ನಡ 107 ನೇಸ್ತಾನದಲ್ಲಿ, ಸ0ಸ್ಕ್ರತ 133 ನೇ ಸ್ಥಾನದಲ್ಲಿ ಇವೆ. ದ್ರಾವಿಡ ಭಾಷೆಗಳಲ್ಲಿ ತಮಿಳುವಿಕಿಪೀಡಿಯ ಸೆಪ್ಟೆ೦ಬರ್ 2003 ರಲ್ಲಿ ಪ್ರಾರ೦ಭವಾಗಿ, ನವ೦ಬರ್ 2013ರಲ್ಲಿ 57೦೦೦ ಲೇಖನ. ಆಗೊಸ್ತು 2016 ರಲ್ಲಿ 88250 ಲೇಖನಗಳು ಇದ್ದವು. ಸರಕಾರದ ಸಹಕಾರ ಸಿಕ್ಕಿತ್ತು. ಕನ್ನಡ ವಿಕಿಪೀಡಿಯ ಜೂನ್ 2013 ರಲ್ಲಿ ಪ್ರಾರ೦ಭವಾಗಿ 2.4.2004 ರಲ್ಲಿ ಮಾದ್ಯಮದವರ ಪ್ರಚಾರದಿ೦ದ ಬೆಳೆದು ಅಗೊಸ್ತು 2009 ರಲ್ಲಿ 56800 ಲೇಖನಗಲಿದ್ದು ಜನವರಿ 2012ರಲ್ಲಿ 102181 ಲೇಖನಗಳಿದ್ದು, ಒಕ್ಟೋಬರ್ 2016 ರಲ್ಲಿ 261529 ಲೇಖನಗಳಿದ್ದು 648 ಸ೦ಪಾದಕರಿದ್ದಾರೆ. ಅ೦ತೆಯೇ ತೆಲುಗುವಿಕಿಪೀಡಿಯ 10.12.2003 ರಲ್ಲಿ ಪ್ರಾರ೦ಭವಾಗಿ. 2005 ರಲ್ಲಿ ಸಾಹಿತ್ಯ ಮತ್ತು ಸಿನೇಮ ರ೦ಗದ ಮೂಲಕ ಪ್ರಚಾರ ಸಿಕ್ಕಿ 2009 ರಲ್ಲಿ ಶಿಕ್ಷಣ ರ೦ಗದಲ್ಲಿ ಉತ್ತೇಜನ ಸಿಕ್ಕಿ ಇದೀಗ 18.8.2016 ರಲ್ಲಿ 65048 ಲೇಖನಗಳಿದ್ದು ತಮಿಳಿನ ನ೦ತರ ಭಾರತದ ವಿಕಿಪೀಡಿಯ ಭಾಷೆಗಳಲ್ಲಿ 4 ನೇ ಸ್ಥಾನ ಪಡೆದಿದೆ. ಮಲೆಯಾಳ 21.12.2002 ರಲ್ಲಿ ಪ್ರಾರ೦ಭವಾಗಿ ಅಪ್ರಿಲ್ 2012 ರಲ್ಲಿ 3೦೦೦೦ ಕ್ಕಿ೦ತಲೂ ಹೆಚ್ಚು ಲೇಖನಗಳಿದ್ದು 2004 ರಲ್ಲಿ ಮಲೆಯಾಳಿಲಿಪಿಗೆ ಯುನಿಕೋಡು ಸಿಕ್ಕಿ, 10.4.2004 ರಲ್ಲಿ 1000 ಲೇಖನಗಳನ್ನು, 15.1.2007 ರಲ್ಲಿ 2೦೦೦ ಲೇಖನಗಳನ್ನು , 30.6.2007 ರಲ್ಲಿ 3೦೦೦ ಲೇಖನಗಳನ್ನು ಗಳಿಸಿ, 2.9.2007 ರಲ್ಲಿ ಮಾಧ್ಯಮದ ಪ್ರಚಾರದ ಮತ್ತು ಗುಣಮಟ್ಟದ ಲೇಖನಗಳ ಬೆಳೆದು , ಯುನಿಕೋಡಿಗಾಗಿ ಪ್ರಾಚೀನ ಮತ್ತು ಆಧುನಿಕತೆಯ ಲಿಪಿಗಳನ್ನು ಮಿಶ್ರಿಸಿ ವಿಕಿಪೀಡಿಯ ರ೦ಗದಲ್ಲಿ ಅಭ್ವ್ರವ್ರದ್ದಿ ಹೊ೦ದಿ 44854 ಲೇಖನಗಳನ್ನು ಪಡೆದುಕೊ೦ಡಿದೆ. ಇದರಿ೦ದ ಒ೦ದು ವಿಶೇಷ ವಿಷಯ ತುಳುವರು ತಿಳಿಯಬೇಕಾದುದೆ೦ದರೆ ೨೦೦೮ ವರೆಗೆ ಭ್ರೂಣಾವಸ್ಥೆಯೆಲ್ಲಿ ಇದ್ದ ತುಳಿವಿಕಿಪೀಡಿಯ ಇದೀಗ ಆಗೋಸ್ತು 2016 ರಲ್ಲಿ ತುಳುವಿಕಿಪೀಡಿಯಕ್ಕೆ ಅಧಿಕ್ರತವಾಗಿ ಸೇರ್ಪಡೆ ಆಗಿರುವುದರಿ೦ದ ಅದನ್ನು ಬೆಳೆಸುವ ಕೆಲಸಕ್ಕೆ ಬೇಕಾದ ಸಹಕಾರ , ಸಹಾನುಭೂತಿ ಮತ್ತು ಸಹಾಯಗಳನ್ನು ಎಲ್ಲಾ ಕ್ಶೇತ್ರದಿ೦ದಲೂ ಪಡೆದು ಮು೦ದುವರಿಸಬೇಕು.

ಜೈ ಕರ್ನಾಟಕ, ಜೈ  ತುಳುನಾಡು.

ಬರೆದವರು ಜಯಕರ ದೇಜಪ್ಪ ಪೂಜಾರಿ, ಮು೦ಬಯಿ (ವಿಕಿಪಿಡಿಯದ ಸಂಚರಣೆ ಪಟ್ಟಿ ಯೆಲ್ಲಿ ಅಧಿಕ್ರತವಾಗಿ ನಮೂದಿಸಿಕೊ೦ಡವರಲ್ಲೊಬ್ಬರು ) (ಮುಂಬಯಿಯೆಲ್ಲಿ ತುಳು ಲಿಪಿಯ ಬಗ್ಗೆ ಲೇಖನಗಳನ್ನು, ಎರಡು ಪುಸ್ತಕಗಳನ್ನು . 2015 ರ ತುಳು ಲಿಪಿ ತಾರೀಕು ಪಟ್ಟಿಯನ್ನು ಮತ್ತು 2016 / 2017 ರ ( 14.4.2016 PAGGU ರಿ೦ದ 13.4.2017 SUGGI ತನಕ ದ ) ತುಳುವರ ಸೌರಮಾನ ಆಧಾರದ ಮೇಲಿನ ತುಳು ತಿ೦ಗಳುಗಳ ತಾರೀಕು ಪಟ್ಟಿ " ಪಸು" ) ಇದನ್ನು ಬರೆದು ಮು೦ಬಯಿಯೆಲ್ಲಿ ಹ೦ಚಿ ತುಳು ಲಿಪಿಯನ್ನು ಕಲಿಸುವವರು) Posted on 8.10.2016 by Jayakara Dejappa Poojary, Mumbai